
Bengaluru: ರಂಜಾನ್ (Ramzan) ಸಮಯದಲ್ಲಿ ಉಪವಾಸ ತೊರೆಯಲು ಮುಸ್ಲಿಂ ಸರ್ಕಾರಿ ನೌಕರರಿಗೆ ಒಂದು ಗಂಟೆ ಕೆಲಸದ ವಿನಾಯಿತಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೆಪಿಸಿಸಿ ಉಪಾಧ್ಯಕ್ಷರಾದ ಸೈಯದ್ ಅಹ್ಮದ್ ಮತ್ತು ನಜೀರ್ ಅಹ್ಮದ್ (KPCC vice-presidents Syed Ahmed and Nazir Ahmed) ಮನವಿ ಮಾಡಿದ್ದಾರೆ.
ಈಗಾಗಲೇ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಮುಸ್ಲಿಂ ಸರ್ಕಾರಿ ನೌಕರರಿಗೆ ರಂಜಾನ್ ಉಪವಾಸ ಸೌಕರ್ಯಕ್ಕಾಗಿ ಕೆಲಸದ ಅವಧಿಯಲ್ಲಿ ವಿನಾಯಿತಿ ನೀಡಲಾಗುತ್ತಿದೆ. ಅದೇ ರೀತಿ ಕರ್ನಾಟಕದಲ್ಲಿಯೂ ಈ ಅವಕಾಶ ನೀಡಬೇಕೆಂದು ಅವರು ಸಿಎಂಗೆ ಪತ್ರ ಬರೆದಿದ್ದಾರೆ.
“ರಂಜಾನ್ ತಿಂಗಳು ಸಮೀಪಿಸುತ್ತಿದ್ದು, ಮುಸ್ಲಿಂ ಬಾಂಧವರು ಒಂದು ತಿಂಗಳು ಉಪವಾಸ ಇರುತ್ತಾರೆ. ಹೀಗಾಗಿ, ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳು ಸರ್ಕಾರಿ ನೌಕರರಿಗೆ ಸಂಜೆ 4 ಗಂಟೆಯ ನಂತರ ಮನೆಗೆ ತೆರಳಿ ಉಪವಾಸ ಮುಕ್ತಾಯ (ಇಪ್ತಿಯಾರ್) ಮಾಡಲು ಅನುಮತಿ ನೀಡಿದ್ದಾರೆ.
ಆದ್ದರಿಂದ, ದಯವಿಟ್ಟು ಕರ್ನಾಟಕದ ಸರ್ಕಾರಿ ನೌಕರರಿಗೆ ಕೂಡ ಇದೇ ರೀತಿ ವಿನಾಯಿತಿ ನೀಡಲು ಸಮ್ಮತಿಸಬೇಕಾಗಿ ವಿನಂತಿಸುತ್ತೇವೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.