Bengaluru: ರಾಜ್ಯ ಸರ್ಕಾರ (Karnataka government) ಮಹತ್ವದ ಆದೇಶವನ್ನು ಹೊರಡಿಸಿ, ಮಾರಣಾಂತಿಕ ರೋಗದಿಂದ ಬಳಲುತ್ತಿರುವ ಹಾಗೂ ಚೇತರಿಸಿಕೊಳ್ಳುವ ಸೂಚನೆ ಕಾಣದವರಿಗೆ ದಯಾಮರಣ ಹಕ್ಕು ನೀಡಲು ಅನುಮತಿಸಿದೆ. ಈ ಆದೇಶವು ರೋಗಿಗಳಿಗೆ ಮಾನವೀಯವಾಗಿ ಸಾವಿಗೆ ಅವಕಾಶ ನೀಡುವಂತೆ ಮಾಡಲಾಗಿದೆ. ದಯಾಮರಣಕ್ಕೆ ಅನುಮತಿ ನೀಡಲು ಇಬ್ಬರು ವೈದ್ಯರನ್ನು ಒಳಗೊಂಡ ಎರಡು ಮಂಡಳಿಗಳ ಸ್ಥಾಪನೆಗೂ ಆದೇಶದಲ್ಲಿ ಸೂಚನೆ ಇದೆ.
ಮಾರಣಾಂತಿಕ ರೋಗದಿಂದ ಬಳಲುತ್ತಿರುವವರ ಕುಟುಂಬಸ್ಥರ ಮನವಿ ಮೇರೆಗೆ ಪ್ರಾಥಮಿಕ ಹಾಗೂ ದ್ವಿತೀಯ ವೈದ್ಯರ ಮಂಡಳಿಗಳು ಪರಿಶೀಲನೆ ನಡೆಸಲಿವೆ. ಪ್ರಾಥಮಿಕ ಮಂಡಳಿಯಲ್ಲಿ ಮೂವರು ವೈದ್ಯರು ಇದ್ದಾರೆ, ಮತ್ತು ದ್ವಿತೀಯ ಮಂಡಳಿಯಲ್ಲಿಯೂ ಮೂವರು ವೈದ್ಯರು ಇರುತ್ತಾರೆ. ಈ ಪೈಕಿ ಒಬ್ಬರು ಸರ್ಕಾರಿ ವೈದ್ಯರಾಗಿರುತ್ತಾರೆ. ಮಂಡಳಿಗಳ ಪರಿಶೀಲನೆಯನ್ನು ನಂತರ ಕೋರ್ಟ್ ಅನುಮತಿಯನ್ನು ನೀಡಿದ ಬಳಿಕ, ವೈದ್ಯರು ಲೈಫ್ ಸಪೋರ್ಟ್ ಸಿಸ್ಟಮ್ ಅನ್ನು ತೆಗೆಯುತ್ತಾರೆ. ಸುಪ್ರೀಂ ಕೋರ್ಟ್, ದಯಾಮರಣ ಕುರಿತು ಮಾರ್ಗದರ್ಶಕ ನಿಯಮಗಳನ್ನು ರೂಪಿಸಲು ಸರ್ಕಾರಕ್ಕೆ ಸೂಚನೆ ನೀಡಿತ್ತು. ಅರುಣಾ ಶಾನಭಾಗ್ ಅವರ ದಯಾಮರಣ ಅರ್ಜಿಯ ತೀರ್ಪಿನ ಸಂದರ್ಭದಲ್ಲಿ ಕೋರ್ಟ್ ಈ ನಿರ್ದೇಶನ ನೀಡಿತ್ತು