ಭತ್ತದ ಯಂತ್ರದೊಳಗೆ ಸಿಲುಕಿ ಎಡಗೈ ಕಳೆದುಕೊಂಡರೂ, ರಿಂಕು ಹೂಡಾ ಜಾವೆಲಿನ್ ಥ್ರೋದಲ್ಲಿ (javelin throw) ವಿಶ್ವದಾಖಲೆಯ ಚಿನ್ನದ ಪದಕ ಗೆದ್ದಿದ್ದಾರೆ.
ನವದೆಹಲಿ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ ಪುರುಷರ Javelin Throw F46 ಸ್ಪರ್ಧೆಯಲ್ಲಿ ರಿಂಕು 66.37 ಮೀಟರ್ ಎಸೆದು ಚಿನ್ನದ ಪದಕ ಪಡೆದರು. ಅವರ ಪ್ರತಿಸ್ಪರ್ಧಿ ಗುರ್ಜರ್ 64.76 ಮೀಟರ್ ಎಸೆದು ಬೆಳ್ಳಿ ಪಡೆದರು. ಮತ್ತೊಬ್ಬ ಭಾರತೀಯ ಅಜೀತ್ ಸಿಂಗ್ 61.77 ಮೀಟರ್ ಎಸೆದು ನಾಲ್ಕನೇ ಸ್ಥಾನ ಪಡೆದರು. ಕ್ಯೂಬಾದ ಗಿಲ್ಲೆರ್ಮೊ ವರೋನಾ ಗೊನ್ಜಾಲೆಜ್ 63.34 ಮೀಟರ್ ಎಸೆದು ಮೂರನೇ ಸ್ಥಾನ ಪಡೆದರು.
F46 ವರ್ಗೀಕರಣ: ಈ ವಿಭಾಗದಲ್ಲಿ ತೋಳಿನ ಕೊರತೆ, ಸ್ನಾಯು ಶಕ್ತಿಯ ದುರ್ಬಲತೆ ಅಥವಾ ತೋಳುಗಳಲ್ಲಿ ಚಲನೆಗೆ ತೊಂದರೆ ಇರುವ ಕ್ರೀಡಾಪಟುಗಳು ಸ್ಪರ್ಧಿಸುತ್ತಾರೆ.
ರಿಂಕು ಹರ್ಷ: “ಭಾರತದಲ್ಲಿ ಇದು ನನ್ನ ಮೊದಲ ಸ್ಪರ್ಧೆ. ನನಗೆ ಮೈದಾನದಲ್ಲಿ ಉತ್ತಮ ಭಾವನೆ ಇತ್ತು. ಇಂದು ನನ್ನ ದಿನ,” ಎಂದರು ಚಿನ್ನದ ಪದಕ ಗೆದ್ದ ರಿಂಕು.
ಹರಿಯಾಣದ ರೋಹ್ಟಕ್ ನ ಧಮರ್ ಗ್ರಾಮದಲ್ಲಿ 3 ವರ್ಷದಾಗಿದ್ದಾಗ ಭತ್ತ ಬಿತ್ತನೆ ಯಂತ್ರದಲ್ಲಿ ಅವರ ಎಡಗೈ ಸಿಲುಕಿ ತುಂಡಾಗಿದೆ.
ಹಿಂದಿನ ಸಾಧನೆಗಳು
- 2018 ಜಕಾರ್ತಾ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಕಂಚು
- 2023 ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್‌ನಲ್ಲಿ ಬೆಳ್ಳಿ
- 2023 ಹ್ಯಾಂಗ್ಝೌ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಬೆಳ್ಳಿ
ಚಾಂಪಿಯನ್ಶಿಪ್‌ನಲ್ಲಿ ರಿಂಕು ಮತ್ತು ಗುರ್ಜರ್ ಅವರ ಪದಕಗಳೊಂದಿಗೆ ಭಾರತ ಈಗ 6ನೇ ಸ್ಥಾನದಲ್ಲಿದೆ (2 ಚಿನ್ನ, 2 ಬೆಳ್ಳಿ, 1 ಕಂಚು).