back to top
24 C
Bengaluru
Friday, July 25, 2025
HomeNewsEngland ನಲ್ಲಿ ಹೊಸ ದಾಖಲೆ ಬರೆದ Rishabh Pant – ವಿಶ್ವದ ಮೊದಲ ಆಟಗಾರ ಎಂಬ...

England ನಲ್ಲಿ ಹೊಸ ದಾಖಲೆ ಬರೆದ Rishabh Pant – ವಿಶ್ವದ ಮೊದಲ ಆಟಗಾರ ಎಂಬ ಗೌರವ!

- Advertisement -
- Advertisement -

ಮ್ಯಾಂಚೆಸ್ಟರ್‌ನಲ್ಲಿರುವ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲ ದಿನ 4 ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿದೆ. ಆರಂಭದಲ್ಲಿ ಭಾರತ 94 ರನ್ ಗಳಿಸಿದರೂ, ಬಳಿಕ 140 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಬಿಕ್ಕಟ್ಟಿಗೆ ಒಳಗಾಯಿತು. ಆರಂಭಿಕ ಆಟಗಾರರಲ್ಲಿ ಜೈಸ್ವಾಲ್ ಮಾತ್ರ ಅರ್ಧಶತಕ (58 ರನ್) ಗಳಿಸಿದರು. ನಾಯಕ ಶುಭ್ಮನ್ ಗಿಲ್ ಕೇವಲ 12 ರನ್​ಗಳಿಸಿ ನಿರ್ಗಮಿಸಿದ್ದಾರೆ.​

ಈ ಸಂದರ್ಭದಲ್ಲಿ ಸಾಯಿ ಸುದರ್ಶನ್ ಹಾಗೂ ರಿಷಭ್ ಪಂತ್ (Rishabh Pant) ಉತ್ತಮ ಜೊತೆಯಾಟ ನೀಡಿದ್ರು. ಪಂತ್ 37 ರನ್ ಗಳಿಸುತ್ತಿದ್ದಾಗ ಕಾಲಿಗೆ ಗಾಯವಾದ ಕಾರಣ ಅರೆಮಾರ್ಗದಲ್ಲೇ ಮೈದಾನ ಬಿಟ್ಟರು. ಆದರೂ ಅವರು ಇತಿಹಾಸ ನಿರ್ಮಿಸಿದರು.

ಪಂತ್ ಸಾಧನೆ: ಪಂತ್ 19 ರನ್ ಗಳಿಸಿದ ಕ್ಷಣದಲ್ಲೇ ಇಂಗ್ಲೆಂಡ್ ನಲ್ಲಿ 1000 ರನ್ ಪೂರ್ಣಗೊಳಿಸಿದ ಪ್ರವಾಸಿ ವಿಕೆಟ್ ಕೀಪರ್ ಎಂಬ ವಿಶ್ವದ ಮೊದಲ ಆಟಗಾರರಾದರು.

ಇತರ ಪ್ರಮುಖ ಆಟಗಾರರ ಇಂಗ್ಲೆಂಡ್‌ನಲ್ಲಿ ಸಿಕ್ಕ ರನ್‌ಗಳು

  • ಎಂಎಸ್ ಧೋನಿ – 778
  • ರಾಡ್ ಮಾರ್ಷ್ (ಆಸ್ಟ್ರೇಲಿಯಾ) – 773
  • ಜಾನ್ ವೇಟ್ (ದಕ್ಷಿಣ ಆಫ್ರಿಕಾ) – 684
  • ಇಯಾನ್ ಹೀಲಿ (ಆಸ್ಟ್ರೇಲಿಯಾ) – 624

ಈ ಮೂಲಕ ಪಂತ್ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page