18ನೇ ಆವೃತ್ತಿಯ IPL ಆರಂಭವಾಗಲು ಕ್ಷಣಗಣನೆ ಆರಂಭವಾಗಿದೆ. ಈ ಲೀಗ್ ನಲ್ಲಿ ಹಲವಾರು ಸ್ಟಾರ್ ಆಟಗಾರರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ಕೆಲವರು ತಮ್ಮ ಕ್ರಿಕೆಟ್ ಜೀವನವನ್ನು ಮತ್ತಷ್ಟು ಮುಂದುವರಿಸಲು ಪ್ರಯತ್ನಿಸಲಿದ್ದರೆ, ಇನ್ನು ಕೆಲವರು ರಾಷ್ಟ್ರೀಯ ತಂಡಕ್ಕೆ ಆಯ್ಕೆಗಾಗಿ ತಾವು ಸೂಕ್ತ ಎಂದು ನಿರೂಪಿಸಲಿದ್ದಾರೆ. ಈ ಪೈಕಿ ಪ್ರಮುಖ ಆಟಗಾರ (Rohit Sharma) ರೋಹಿತ್ ಶರ್ಮಾ.
ಮುಂಬೈ ಇಂಡಿಯನ್ಸ್ ತಂಡದ ಯಶಸ್ವಿ ನಾಯಕನಾಗಿದ್ದ ರೋಹಿತ್ ಶರ್ಮಾ ಈ ಬಾರಿ ಕೇವಲ ಆಟಗಾರನಾಗಿ ತಂಡವನ್ನು ಪ್ರತಿನಿಧಿಸಲಿದ್ದಾರೆ. ಮಾರ್ಚ್ 23 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಕಣಕ್ಕೆ ಇಳಿಯುತ್ತಲೇ ದಿನೇಶ್ ಕಾರ್ತಿಕ್ ಅವರ ದಾಖಲೆ ಮುರಿಯಲಿದ್ದಾರೆ.
ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರರ ಪಟ್ಟಿ
- ಮಹೇಂದ್ರ ಸಿಂಗ್ ಧೋನಿ – 264 ಪಂದ್ಯ, 5243 ರನ್
- ದಿನೇಶ್ ಕಾರ್ತಿಕ್ – 257 ಪಂದ್ಯ, 4842 ರನ್
- ರೋಹಿತ್ ಶರ್ಮಾ – 257 ಪಂದ್ಯ, 6628 ರನ್
- ವಿರಾಟ್ ಕೊಹ್ಲಿ – 252 ಪಂದ್ಯ, 8004 ರನ್
- ರವೀಂದ್ರ ಜಡೇಜಾ – 240 ಪಂದ್ಯ, 2959 ರನ್
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆಡುತ್ತಿದ್ದಂತೆಯೇ ರೋಹಿತ್ ಶರ್ಮಾ ಈ ಪಟ್ಟಿಯಲ್ಲಿ ದಿನೇಶ್ ಕಾರ್ತಿಕ್ ಅವರನ್ನು ಮೀರಿ ಎರಡನೇ ಸ್ಥಾನಕ್ಕೆ ಏರಲಿದ್ದಾರೆ. ಇದರಿಂದಾಗಿ ಅವರು ಐಪಿಎಲ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯಲಿದ್ದಾರೆ.