ರಷ್ಯಾ-ಉಕ್ರೇನ್ (Russia-Ukraine) ಯುದ್ಧದಲ್ಲಿ ಶಾಂತಿಯ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ, ಯುದ್ಧದ ಅವಧಿಯಲ್ಲಿ ರಷ್ಯಾದ ಸೈನಿಕರು 19,556 ಉಕ್ರೇನ್ ಮಕ್ಕಳನ್ನು ಅಪಹರಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಅಪಹರಣಕ್ಕೊಳಗಾದ ಮಕ್ಕಳ ಸುರಕ್ಷಿತ ಮರಳುವಿಕೆ ಕುರಿತಂತೆ ಮಹತ್ವದ ಪ್ರಶ್ನೆಗಳು ಉದ್ಭವಿಸಿವೆ.
ರಷ್ಯಾ-ಉಕ್ರೇನ್ ಯುದ್ಧವು ಎರಡನೇ ಮಹಾಯುದ್ಧದ ನಂತರದ ಅತ್ಯಂತ ದೀರ್ಘಾವಧಿಯ ಸಂಘರ್ಷವಾಗಿದ್ದು, ಈ ನಡುವೆ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಕೋಟ್ಯಂತರ ಡಾಲರ್ ಮೌಲ್ಯದ ಆಸ್ತಿಪಾಸ್ತಿ ನಾಶವಾಗಿದೆ.
ಈ ಹೊಸ ಆರೋಪದ ಬಗ್ಗೆ ಬ್ರಿಟನ್ ಲೇಬರ್ ಪಕ್ಷದ ಒಬ್ಬ ಸಂಸದರು ಪ್ರಧಾನಿ ಕೀರ್ ಸ್ಟಾರ್ಮರ್ (Prime Minister Keir Starmer) ಅವರ ಸರ್ಕಾರವನ್ನು ಪ್ರಶ್ನಿಸಿದ್ದು, ಅಪಹೃತ ಮಕ್ಕಳ ಸುರಕ್ಷತೆ ಹಾಗೂ ಮರಳುವಿಕೆಯ ಬಗ್ಗೆ ಸ್ಪಷ್ಟತೆ ನೀಡುವಂತೆ ಒತ್ತಾಯಿಸಿದ್ದಾರೆ.