
ಗುವಾಹಟಿಯಲ್ಲಿ ನಡೆದ IPL 2025ರ 11ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು (Rajasthan Royals team) ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 6 ರನ್ ಅಂತರದಿಂದ ರೋಚಕ ಗೆಲುವು ಸಾಧಿಸಿದೆ. ಇದರಿಂದಾಗಿ, ಸತತ ಎರಡು ಪಂದ್ಯಗಳಲ್ಲಿ ಕಂಗೆಟ್ಟಿದ್ದ ರಾಜಸ್ಥಾನ ತಂಡ ಇದೀಗ ಈಗ ಗೆಲುವಿನ ಹಾದಿಯತ್ತ ಮರಳಿದೆ.
ಪಂದ್ಯದ ಸಂಭ್ರಮದಲ್ಲಿದ್ದ ರಾಜಸ್ಥಾನ ರಾಯಲ್ಸ್ ನಾಯಕ ರಿಯಾನ್ ಪರಾಗ್‌ಗೆ (Ryan Parag) BCCI ₹12 ಲಕ್ಷ ದಂಡ ವಿಧಿಸಿದೆ. ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆಯ ಕಾರಣ ಈ ದಂಡ ವಿಧಿಸಲಾಗಿದ್ದು, ನಿಧಾನಗತಿಯ ಓವರ್ ದರ ಕಾಯ್ದುಕೊಂಡಿದ್ದಕ್ಕೆ ಶಿಕ್ಷೆಯಾಗಿದೆ. ನಿಯಮಾನುಸಾರ, ಇದು ಮತ್ತೊಮ್ಮೆ ಸಂಭವಿಸಿದರೆ ಒಂದು ಪಂದ್ಯಕ್ಕೆ ನಿಷೇಧ ಜಾರಿಗೆ ಬರಲಿದೆ.
ಪಂದ್ಯದ ಪ್ರಮುಖ ಹೈಲೈಟ್ಸ್
- ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್ 182/9 ರನ್ ಕಲೆಹಾಕಿತು.
- ನಿತೀಶ್ ರಾಣಾ 81 ರನ್ ಸ್ಫೋಟಕ ಬ್ಯಾಟಿಂಗ್ ಮಾಡಿದರು.
- ನಾಯಕ ರಿಯಾನ್ ಪರಾಗ್ 37 ರನ್ ಗಳಿಸಿ ನೆರವಾದರು.
- ಸಿಎಸ್ಕೆ ತಂಡ 176 ರನ್ ಮಾತ್ರ ಗಳಿಸಿ ಸೋಲನ್ನಪ್ಪಿತು.
ಬೆರಳಿನ ಗಾಯದಿಂದ ಸಂಜು ಸ್ಯಾಮ್ಸನ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಮಾತ್ರ ಆಡುತ್ತಿದ್ದು, ರಿಯಾನ್ ಪರಾಗ್ ತಾತ್ಕಾಲಿಕ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಮೊದಲು ಹಿನ್ನಡೆ ಅನುಭವಿಸಿದರೂ, ತೃತೀಯ ಪಂದ್ಯದಲ್ಲಿ ಜಯ ಸಾಧಿಸಿದ್ದಾರೆ.