Doddaballapura, Bengaluru Rural : ಓಮೈಕ್ರಾನ್ (Omicron) ತಡೆಗಟ್ಟುವ ಸಲುವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಓಂಶಕ್ತಿ (Melmaruvathur Omsakthiamma Temple), ಶಬರಿಮಲೆ (Sabarimala Lord Ayyappa Temple) ಇತರೆ ಧಾರ್ಮಿಕ ಸ್ಥಳ ಅಥವಾ ಹೊರ ರಾಜ್ಯಗಳಿಂದ ಜಿಲ್ಲೆಗೆ ಪ್ರವೇಶ ಮಾಡುವ, ಪ್ರಯಾಣ ಹೊರಡುವ ಮುನ್ನ ಕಡ್ಡಾಯವಾಗಿ RT-PCR Covid-19 Test ಪರೀಕ್ಷೆಗೆ ಒಳಪಡಿಸಬೇಕು. KSRTC ಸಂಸ್ಥೆಯ ಬಸ್ ಸ್ಥಳೀಯ ಆಸ್ಪತ್ರೆ ಬಳಿ ನಿಲುಗಡೆ ಮಾಡಿ ಪ್ರಯಾಣಿಕರಿಗೆ ಕಡ್ಡಾಯವಾಗಿ ಆರ್‌ಟಿಪಿಸಿಆರ್ ತಪಾಸಣೆಗೆ ಮಾಡಿಸಬೇಕು. ನಂತರ ಪ್ರಯಾಣಿಕರು ಏಳು ದಿನ ಹೋಂ ಕ್ವಾರೈಂಟನ್‌ನಲ್ಲಿ ಇದ್ದು, 8 ನೇ ದಿನ ಕೋವಿಡ್ ಪರೀಕ್ಷೆಯ ವರದಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.
ದೊಡ್ಡಬಳ್ಳಾಪುರ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ನಗರಕ್ಕೆ ಬಂದಿರುವ ಭಕ್ತಾದಿಗಳಿಗೆ ಭಾನುವಾರ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಲಾಯಿತು. ಪ್ರಾಥಮಿಕ ವರದಿಯಲ್ಲಿ ಯಾರೊಬ್ಬರಲ್ಲೂ ಕೋವಿಡ್ ಸೋಂಕು ದೃಢಪಟ್ಟಿಲ್ಲ ಎಂದು ಸರ್ಕಾರಿ ಆಸ್ಪತ್ರೆ ವೈದ್ಯರು ಹೇಳಿದ್ದಾರೆ.