back to top
25.2 C
Bengaluru
Tuesday, July 22, 2025
HomeNewsIsha Foundation ವಿರುದ್ಧ ಕ್ರಮಕ್ಕೆ Supreme Court ತಡೆಯಾಜ್ಞೆ

Isha Foundation ವಿರುದ್ಧ ಕ್ರಮಕ್ಕೆ Supreme Court ತಡೆಯಾಜ್ಞೆ

- Advertisement -
- Advertisement -

New Delhi: ಸದ್ಗುರು ಜಗ್ಗಿ ವಾಸುದೇವ್ (Sadhguru Jaggi Vasudev) ಅವರ ಇಶಾ ಫೌಂಡೇಶನ್ (Isha Foundation) ವಿರುದ್ಧ ದಾಖಲಾಗಿರುವ ಎಲ್ಲಾ ಕ್ರಿಮಿನಲ್ ಪ್ರಕರಣಗಳ ಕುರಿತು ತಮಿಳುನಾಡು ಪೊಲೀಸರಿಂದ ವರದಿ ಕೇಳಿದ್ದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ (Supreme Court) ಗುರುವಾರ ತಡೆ ನೀಡಿದೆ ಎಂದು ಸುದ್ದಿ ಸಂಸ್ಥೆ PTI ವರದಿ ಮಾಡಿದೆ.

ಪ್ರತಿಷ್ಠಾನದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ಸುಪ್ರೀಂಕೋರ್ಟ್ನಿಂದ ತುರ್ತು ವಿಚಾರಣೆಯನ್ನು ಕೋರಿದ್ದು ಕೇಂದ್ರವು ಅದರ ಪರವಾಗಿ ಪ್ರತಿಕ್ರಿಯಿಸಿದೆ. ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು “ಹೈಕೋರ್ಟ್ ತುಂಬಾ ಜಾಗರೂಕರಾಗಿರಬೇಕು” ಎಂದು ಹೇಳಿದರು.

ಅಲ್ಲದೆ ಇಶಾ ಫೌಂಡೇಶನ್ನಲ್ಲಿರುವ ತಮ್ಮ ಇಬ್ಬರು ಪುತ್ರಿಯರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಿ ಡಾ ಎಸ್ ಕಾಮರಾಜ್ ಅವರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ತನಗೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್, ಮದ್ರಾಸ್ ಹೈಕೋರ್ಟ್ ಗೆ ಸೂಚಿಸಿದೆ.

Court ಆದೇಶ: Isha Foundation ಆಶ್ರಮಕ್ಕೆ ಪೊಲೀಸ್ raid

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page