ಬೆಂಗಳೂರು: ಭಾರತ ಸರ್ಕಾರವು WhatsApp desktop ಬಳಕೆದಾರರಿಗೆ ಗಂಭೀರ ಭದ್ರತಾ ಎಚ್ಚರಿಕೆಯನ್ನು ನೀಡಿದೆ. CERT-In ಎಂಬ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡವು ಏಪ್ರಿಲ್ 9ರಂದು ಈ ಎಚ್ಚರಿಕೆಯನ್ನು ಪ್ರಕಟಿಸಿದೆ.
ವಿಂಡೋಸ್ ಪಿಸಿ ಬಳಕೆದಾರರು ವಾಟ್ಸ್ಆ್ಯಪ್ desktop ಅಪ್ಲಿಕೇಶನ್ ಬಳಸಿ ಇರುವಾಗ, ಹ್ಯಾಕರ್‌ಗಳು ಸೌಲಭ್ಯದ ದುರ್ಬಲತೆಗಳನ್ನು ಬಳಸಿಕೊಂಡು ಸಾಧನವನ್ನು ಕಬಳಿಸಬಹುದು. ಇದರಿಂದ ಅವರು ಅಕ್ರಮ ಕೋಡ್ ಅನ್ನು ಚಲಾಯಿಸಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯುವ ಸಾಧ್ಯತೆ ಇದೆ.
ವಿಂಡೋಸ್‌ಗಾಗಿ 2.2450.6 ಕ್ಕಿಂತ ಹಳೆಯ ಆವೃತ್ತಿಯ ವಾಟ್ಸ್ಆ್ಯಪ್ ಡೆಸ್ಕ್ಟಾಪ್ ಬಳಕೆದಾರರು ಈ ಅಪಾಯಕ್ಕೆ ಗುರಿಯಾಗಬಹುದು ಎಂದು ಸರ್ಕಾರ ಎಚ್ಚರಿಸಿದೆ.
ಸುರಕ್ಷಿತರಾಗಲು ಈ ಕೆಳಗಿನ ಹಂತಗಳನ್ನು ಅನುಸರಿಸಿ
- ಮೈಕ್ರೋಸಾಫ್ಟ್ ಸ್ಟೋರ್ ಗೆ ಹೋಗಿ
- “WhatsApp Messenger” ಹುಡುಕಿ
- “Update” ಆಯ್ಕೆಗೆ ಕ್ಲಿಕ್ ಮಾ
ಐಫೋನ್, ಐಪ್ಯಾಡ್, ಮ್ಯಾಕ್, ಆಪಲ್ TV ಅಥವಾ Vision Pro ಬಳಸುವವರಿಗೆ ಕೂಡ CERT-In ಭದ್ರತಾ ಎಚ್ಚರಿಕೆ ನೀಡಿದೆ. ಹಲವು ಅಪಾಯಕಾರಿ ದೋಷಗಳನ್ನು ಹ್ಯಾಕರ್‌ಗಳು ದುರ್ಬಳಕೆ ಮಾಡಬಹುದು.
ಈ ದೋಷಗಳು iOS, iPadOS, macOS, Safari ಬ್ರೌಸರ್‌ಗಳಿಗೆ ಸಂಬಂಧಿಸಿದ್ದು, ಹ್ಯಾಕರ್‌ಗಳು ನಿಮ್ಮ ಸಾಧನದ ಮೇಲೆಯೇ ಸಂಪೂರ್ಣ ನಿಯಂತ್ರಣ ಹೊಂದಬಹುದು.
CERT-In ವರದಿ ಪ್ರಕಾರ, ಬಳಕೆದಾರರು ತಕ್ಷಣವೇ ತಮ್ಮ ಆಪಲ್ ಸಾಧನಗಳನ್ನು ಇತ್ತೀಚಿನ ಆವೃತ್ತಿಗೆ ನವೀಕರಿಸಬೇಕು.