Gangtok (Sikkim): ಉತ್ತರ ಸಿಕ್ಕಿಂನಲ್ಲಿ ಭಾರಿ ಮಳೆಯಿಂದ (Severe Flooding) ಭೂಕುಸಿತ ಉಂಟಾಗಿ, ಚುಂಗ್ಥಾಂಗ್ (Chungthang) ಪಟ್ಟಣದಲ್ಲಿ ಸಿಲುಕಿದ್ದ 1,100 ಪ್ರವಾಸಿಗರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಅತಿ ಹೆಚ್ಚು ಪ್ರವಾಸಿಗರು ಮಂಗನ್ ಜಿಲ್ಲೆಯ ಪ್ರಸಿದ್ಧ ಗಿರಿಧಾಮಗಳಲ್ಲಿ ಸಿಲುಕಿಕೊಂಡಿದ್ದರಿಂದ ಸುಮಾರು 1,800 ಜನರನ್ನು ಸ್ಥಳಾಂತರಿಸುವ ಕಾರ್ಯಾಚರಣೆ ನಡೆಯುತ್ತಿದೆ. ಈ ಪ್ರವಾಸಿಗರೆಲ್ಲರು ಚುಂಗ್ಥಾಂಗ್‌ನಿಂದ ಗ್ಯಾಂಗ್ಟಾಕ್ಗೆ ದಾರಿ ಮಾಡಿಕೊಳ್ಳುತ್ತಿದ್ದಾರೆ.
ಗುರುದ್ವಾರದಲ್ಲಿದ್ದ ಪ್ರವಾಸಿಗರನ್ನು 200 ಕ್ಕೂ ಹೆಚ್ಚು ವಾಹನಗಳ ಮೂಲಕ ಸ್ಥಳಾಂತರ ಮಾಡಲಾಗಿದೆ. ಸಾಂಗ್ಕಲಾಂಗ್ ನಲ್ಲಿ ಪುನರ್ನಿರ್ಮಾಣಗೊಂಡ ಬೈಲಿ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ, ಮತ್ತು ಅದರ ಮೂಲಕ ಚುಂಗ್ಥಾಂಗ್‌ನಿಂದ ಮಂಗನ್ಗೆ ವಾಹನಗಳು ಪ್ರಯಾಣಿಸುತ್ತಿವೆ. ಲಾಚೆನ್ ಮತ್ತು ಲಾಚುಂಗ್ ನಡುವಿನ ರಸ್ತೆಗಳಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, ಅದರ ಪ್ರಯಾಣದ ಸ್ಥಿತಿ ಪರಿಷ್ಕೃತವಾಗುತ್ತಿದೆ.
“ಈ ವಾರ ಪೂರ್ತಿ ಮಳೆ ಮುಂದುವರೆಯಲಿದೆ. ಮುಂದಿನ ವಾರ ಪರಿಸ್ಥಿತಿ ಸುಧಾರಿಸಬಹುದು. ಶನಿವಾರದಿಂದ ಹವಾಮಾನದಲ್ಲಿ ಬದಲಾವಣೆ ಕಾಣುವ ಮೂಲಕ ಯತಾಸ್ಥಿತಿಗೆ ಮರಳಲಿದೆ” ಎಂದು ಸಿಕ್ಕಿಂ ಹವಾಮಾನ ಇಲಾಖೆ ನಿರ್ದೇಶಕರು ಹೇಳಿದ್ದಾರೆ.
ಈಗಾಗಲೇ, ಮಂಗನ್ ಜಿಲ್ಲಾಡಳಿತವು ಪ್ರವಾಸಿಗರಿಗೆ ಪ್ರವೇಶವನ್ನು ನಿಷೇಧಿಸಿದೆ. ಮುಂದಿನ ಸೂಚನೆವರೆಗೆ ಯಾವುದೇ ಪ್ರವಾಸಿಗರನ್ನು ಉತ್ತರ ಸಿಕ್ಕಿಂನಲ್ಲಿ ಪ್ರವೇಶಿಸುವಂತೆ ತಡೆಯಲಾಗಿದೆ.
ಸಿಕ್ಕಿಂ ರಾಜ್ಯಪಾಲ ಓಂ ಪ್ರಕಾಶ್ ಮಾಥುರ್, ಎಲ್ಲಾ ಪ್ರವಾಸಿಗರೂ ಸುರಕ್ಷಿತವಾಗಿದ್ದಾರೆಂದು ದೃಢಪಡಿಸಿದ್ದಾರೆ. ಮುಖ್ಯಮಂತ್ರಿಯವರು ಪ್ರವಾಸಿಗರ ರಕ್ಷಣಾ ಕಾರ್ಯಾಚರಣೆಗೆ ನೇರವಾಗಿ ನಿರೀಕ್ಷಣೆಯಲ್ಲಿದ್ದಾರೆ.
ಹಿಂದೆ, ಲೋನಾಕ್ ಸರೋವರ ಒಡೆದು ಭಾರಿ ಪ್ರವಾಹ ಉಂಟಾಗಿದ್ದು, ನೂರಾರು ಕುಟುಂಬಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದವು.