back to top
24.9 C
Bengaluru
Thursday, July 24, 2025
HomeIndiaಶವದ ಮೇಲಿನ ಲೈಂಗಿಕಕ್ರಿಯೆ ಅತ್ಯಾಚಾರವಲ್ಲ: Supreme Court ತೀರ್ಪು

ಶವದ ಮೇಲಿನ ಲೈಂಗಿಕಕ್ರಿಯೆ ಅತ್ಯಾಚಾರವಲ್ಲ: Supreme Court ತೀರ್ಪು

- Advertisement -
- Advertisement -

New Delhi/Bengaluru: ಶವದ ಮೇಲಿನ ಲೈಂಗಿಕ ಕ್ರಿಯೆಯನ್ನು ಅತ್ಯಾಚಾರವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪನ್ನು ಸುಪ್ರೀಂಕೋರ್ಟ್ (Supreme Court) ಕೂಡಾ ಎತ್ತಿಹಿಡಿದಿದೆ.

21 ವರ್ಷದ ಯುವತಿಯನ್ನು ಕೊಲೆ ಮಾಡಿ, ನಂತರ ಆರೋಪಿಗಳು ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಕೊಲೆ ಮತ್ತು ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಆದರೆ, ಕರ್ನಾಟಕ ಹೈಕೋರ್ಟ್ 2023ರಲ್ಲಿ ಶವದ ಮೇಲಿನ ಲೈಂಗಿಕ ಕ್ರಿಯೆಯನ್ನು ಅತ್ಯಾಚಾರವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿತ್ತು.

ಈ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ಇಂದು (ಫೆ. 04) ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರ ಪೀಠ ರಾಜ್ಯ ಸರ್ಕಾರದ ಮೇಲ್ಮನವಿಯನ್ನು ವಜಾಗೊಳಿಸಿ, ಹೈಕೋರ್ಟಿನ ತೀರ್ಪನ್ನು ಅಂಗೀಕರಿಸಿದೆ.

ಈ ಸಂಬಂಧ ಕಾನೂನು ರೂಪಿಸಲು ಸಂಸತ್‌ಗೆ ಅವಕಾಶವಿದ್ದು, ಅಗತ್ಯವಿದ್ದರೆ ಸಂಸತ್ತು ಕಾನೂನು ರೂಪಿಸಬಹುದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page