
ಬಾಂಗ್ಲಾದೇಶದ ಆಲ್‌ರೌಂಡರ್ ಶಾಕಿಬ್ ಅಲ್ ಹಸನ್, (Shakib Al Hasan) ಟಿ20 ಕ್ರಿಕೆಟ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್ (CPL 2025)ನಲ್ಲಿ ಆಂಟಿಗುವಾ ಮತ್ತು ಬಾರ್ಬುಡಾ ಫಾಲ್ಕನ್ಸ್ ಪರ ಆಡುತ್ತಾ ಅವರು ಅದ್ಭುತ ದಾಖಲೆ ಬರೆದಿದ್ದಾರೆ.
ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೆಟ್ರಿಯಾಟ್ಸ್ ವಿರುದ್ಧ ಶಾಕಿಬ್ ಬೌಲಿಂಗ್‌ನಲ್ಲಿ 2 ಓವರ್‌ನಲ್ಲಿ ಕೇವಲ 11 ರನ್ ನೀಡಿ 3 ವಿಕೆಟ್ ಕಿತ್ತುಕೊಂಡರು. ಬಳಿಕ ಬ್ಯಾಟಿಂಗ್‌ನಲ್ಲಿ 18 ಎಸೆತಗಳಲ್ಲಿ 25 ರನ್ ಗಳಿಸಿದರು. ಈ ಆಲ್ರೌಂಡರ್ ಪ್ರದರ್ಶನದಿಂದ ಫಾಲ್ಕನ್ಸ್ ತಂಡವು ಇನ್ನೂ 2 ಎಸೆತಗಳು ಬಾಕಿ ಇರುವಾಗಲೇ ಗೆಲುವು ಸಾಧಿಸಿತು. ಶಾಕಿಬ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಈ ಪಂದ್ಯದಲ್ಲಿ 3 ವಿಕೆಟ್ ಪಡೆದ ಶಾಕಿಬ್, ಟಿ20 ಕ್ರಿಕೆಟ್‌ನಲ್ಲಿ 500 ವಿಕೆಟ್ ಗಳ ಮೈಲಿಗಲ್ಲು ತಲುಪಿದರು. ಇದರಿಂದ ಅವರು ವಿಶ್ವದ ಐದನೇ ಬೌಲರ್ ಎನಿಸಿಕೊಂಡರು.
ಇದರ ಜೊತೆಗೆ, ಟಿ20 ಕ್ರಿಕೆಟ್‌ನಲ್ಲಿ 500+ ವಿಕೆಟ್ ಮತ್ತು 7000+ ರನ್ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಗೌರವವೂ ಶಾಕಿಬ್‌ಗೆ ಸಿಕ್ಕಿದೆ.
- ಸಂಖ್ಯಾ ದಾಖಲಾತಿ
- ಒಟ್ಟು 457 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ.
- ರನ್ ಗಳಿಸಿ 33 ಅರ್ಧಶತಕ ಬಾರಿಸಿದ್ದಾರೆ.
- 502 ವಿಕೆಟ್ ಪಡೆದುಕೊಂಡಿದ್ದಾರೆ.
ಪೆಟ್ರಿಯಾಟ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ನಲ್ಲಿ 133 ರನ್ ಮಾತ್ರ ಬಾರಿಸಿತು. ಶಾಕಿಬ್ 3 ವಿಕೆಟ್, ಇತರರು ತಲಾ 1 ವಿಕೆಟ್ ಪಡೆದರು. ಫಾಲ್ಕನ್ಸ್ ಪರ ಕರಿಮಾ ಗೊರೆ (52*) ಅಜೇಯ ಅರ್ಧಶತಕ ಬಾರಿಸಿ, ಶಾಕಿಬ್ (25) ಜೊತೆ ತಂಡವನ್ನು ಗೆಲುವಿನ ದಡ ಸೇರಿಸಿದರು.
ಟಿ20 ಕ್ರಿಕೆಟ್‌ನಲ್ಲಿ 7000+ ರನ್ ಮತ್ತು 500+ ವಿಕೆಟ್ ಗಳಿಸಿದ ಮೊದಲ ಆಟಗಾರ ಶಾಕಿಬ್ ಅಲ್ ಹಸನ್.