Bengaluru: ಕರ್ನಾಟಕ BJP ಬಣ ಜಗಳ ತಾರಕಕ್ಕೇರಿದ ಹಿನ್ನೆಲೆ, ಹೈಕಮಾಂಡ್ ಶಾಸಕರ ಮಧ್ಯೆ ಇರುವ ಬಣ ಸಂಘರ್ಷದಲ್ಲಿ ಎಚ್ಚೆತ್ತುಕೊಂಡಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (MLA Basanagouda Patil Yatnal) ವಿರುದ್ಧ ಶಿಸ್ತು ಸಮಿತಿ ಶೋಕಾಸ್ ನೋಟಿಸ್ (Show cause notice) ಹೊರಡಿಸಿದೆ.
BJP ರಾಜ್ಯಾಧ್ಯಕ್ಷ BY ವಿಜಯೇಂದ್ರ (BY Vijayendra) ದೆಹಲಿಯಲ್ಲಿ ಹೈಕಮಾಂಡ್ ಭೇಟಿ ಮಾಡಿದ ನಂತರ ಈ ನೋಟಿಸ್ ಜಾರಿಯಾಗಿದೆ. ಪಕ್ಷದ ನಿಯಮಗಳಿಗೆ ವಿರೋಧವಾಗಿ ಯತ್ನಾಳ್ ಮಾಧ್ಯಮಗಳಲ್ಲಿ ಮತ್ತು ಪಕ್ಷದ ವೇದಿಕೆಗಳಲ್ಲಿ ನೀಡಿದ ನಿರಂತರ ಹೇಳಿಕೆಗಳು ಈ ಕ್ರಮಕ್ಕೆ ಕಾರಣವಾಗಿದೆ.
ಶೋಕಾಸ್ ನೋಟಿಸ್‌ನಲ್ಲಿ, “ಪಕ್ಷದ ವಿರುದ್ಧದ ಅಶಿಷ್ಟ ಕ್ರಿಯೆಗಳು ಮತ್ತು ನಿಯಮ ಉಲ್ಲಂಘನೆ”ಯ ಬಗ್ಗೆ ಕೇಂದ್ರೀಯ ಶಿಸ್ತು ಸಮಿತಿ ತೀವ್ರವಾಗಿ ಗಮನ ಸೆಳೆದಿದೆ. ಈ ಹಿಂದೆ ನೋಟಿಸ್‌ಗೆ ಉತ್ತರಿಸಿಯೂ ಅವರ ನಡೆ ತಿದ್ದದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ.
ಯತ್ನಾಳ್‌ನ್ನು ಹತ್ತು ದಿನಗಳ ಒಳಗೆ ವಿವರಣೆ ಸಲ್ಲಿಸಲು ಸೂಚಿಸಲಾಗಿದೆ. ಉತ್ತರ ನೀಡದಿದ್ದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.
ಇದರ ಮಧ್ಯೆ, ಯತ್ನಾಳ್ ಬಣವೂ ಹೈಕಮಾಂಡ್ ಭೇಟಿ ಮಾಡಲು ಚಿಂತನೆ ಮಾಡಿದ್ದು, ಸಮಾವೇಶದ ಮೂಲಕ ತಿರುಗೇಟು ನೀಡಲು ಸಿದ್ಧತೆಯಲ್ಲಿದೆ.