![Shreyas Iyer Shreyas Iyer](https://kannadatopnews.com/wp-content/uploads/2025/02/Photoshop_Online-news-copy-83.jpg)
ಏಕದಿನ ಕ್ರಿಕೆಟ್ ನಲ್ಲಿ ಟೀಮ್ ಇಂಡಿಯಾ ಆಟಗಾರ ಶ್ರೇಯಸ್ ಅಯ್ಯರ್ (Shreyas Iyer) ಅತ್ಯಂತ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅವರು 36 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 9 ಫೋರ್ ಗಳೊಂದಿಗೆ 59 ರನ್ ಬಾರಿಸಿದ್ದಾರೆ. ಇದರಿಂದ ಅವರ 19ನೇ ಅರ್ಧಶತಕ ಸಾಧನೆ ನಡೆದಿದೆ.
ಈವರೆಗೆ 58 ಏಕದಿನ ಇನಿಂಗ್ಸ್ ಆಡಿದ ಶ್ರೇಯಸ್ ಅಯ್ಯರ್ 5 ಶತಕ ಮತ್ತು 19 ಅರ್ಧಶತಕಗಳನ್ನು ಕಲೆಹಾಕಿದ್ದಾರೆ. ಮೊದಲ 58 ಪಂದ್ಯಗಳಲ್ಲಿ ಇಡೀ ಭಾರತ ತಂಡದಲ್ಲಿ ಅತಿ ಹೆಚ್ಚು 50+ ಸ್ಕೋರ್ ಗಳಿಸಿದ ಬ್ಯಾಟರ್ ಆಗಿ ಅವರು ಸ್ಥಾನ ಪಡೆದಿದ್ದಾರೆ.
ಆದರೆ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಹಾಗೂ ನವಜೋತ್ ಸಿಂಗ್ ಸಿಧು ಮೊದಲ 58 ಇನಿಂಗ್ಸ್‌ನಲ್ಲಿ 21 ಬಾರಿ 50+ ಸ್ಕೋರ್ ಗಳಿಸಿದ್ದಾರೆ. ಆದರೆ ಶ್ರೇಯಸ್ ಅಯ್ಯರ್ ಈಗ 58 ಇನಿಂಗ್ಸ್‌ನಲ್ಲಿ 24 ಬಾರಿ 50+ ಸ್ಕೋರ್ ಗಳಿಸುವ ಮೂಲಕ ಇವರನ್ನು ಹಿಂದಿಕ್ಕಿದ್ದಾರೆ.
58 ಏಕದಿನ ಇನಿಂಗ್ಸ್‌ಗಳಲ್ಲಿ 2428 ಎಸೆತಗಳನ್ನು ಎದುರಿಸಿ 2480 ರನ್ ಗಳಿಸಿರುವ ಶ್ರೇಯಸ್ ಅಯ್ಯರ್, ಭಾರತದ ಮಧ್ಯಮ ಕ್ರಮಾಂಕದ ಮುಖ್ಯ ಆಟಗಾರರಾಗಿದ್ದಾರೆ. ಅಯ್ಯರ್ ಮುಂದಿನ ಚಾಂಪಿಯನ್ಸ್ ಟ್ರೋಫಿಯಲ್ಲಿ 3,000 ರನ್ ಗಳಿಸುವ ವಿಶ್ವಾಸ ಹೊಂದಿದ್ದಾರೆ.