
ಅಂಡರ್-19 ಮಹಿಳಾ ಟಿ20 ವಿಶ್ವಕಪ್‌ನ (Under-19 Women’s T20 World Cup) 2ನೇ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 9 ವಿಕೆಟ್‌ಗಳ ಜಯ ಸಾಧಿಸಿದ ಭಾರತ, ಫೈನಲ್ ಗೆ ಪ್ರವೇಶಿಸಿದೆ. ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.
ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ, ಇಂಗ್ಲೆಂಡ್ ಮೊದಲು ಬ್ಯಾಟ್ ಮಾಡುವಾಗ 20 ಓವರ್‌ಗಳಲ್ಲಿ 8 ವಿಕೆಟ್‌ಗಳನ್ನು ನಷ್ಟಪಡಿಸಿ 113 ರನ್ ಗಳಿಸಿತು. ದವಿನಾ ಪೆರ್ರಿನ್ 45 ಹಾಗೂ ನಾಯಕಿ ಬಿ ನೊರ್ಗ್ರೊವ್ 30 ರನ್ ಗಳಿಸಿದರು. ಭಾರತ ಪರ ಪಾರುಣಿಕಾ ಸಿಸೋಡಿಯಾ ಹಾಗೂ ವೈಷ್ಣವಿ 3 ವಿಕೆಟ್‌ಗಳನ್ನು ಪಡೆದರು, ಹಾಗೂ ಆಯುಷಿ ಶುಕ್ಲಾ 2 ವಿಕೆಟ್‌ಗಳನ್ನು ಕಿತ್ತರು.
ಭಾರತ, ಸುಲಭ ಗುರಿಯನ್ನು ಬೆನ್ನತ್ತಿ, ತ್ರಿಶಾ ಮತ್ತು ಜಿ. ಕಮಲಿನಿ ಮೊದಲ ವಿಕೆಟಿಗೆ 60 ರನ್ ಗಳಿಸಿದರು. ತ್ರಿಶಾ 35 ರನ್ ಗಳಿಸಿದರೂ, ಕಮಲಿನಿ ಅರ್ಧಶತಕ ಸಿಡಿಸಿ 15 ಓವರ್‌ಗಳಲ್ಲಿ 117/1 ಅಂಕಗಳನ್ನು ಗಳಿಸಿ, ತಂಡವನ್ನು ಜಯದ ದಡ ಸೇರಿಸಿದರು.
ಮತ್ತೊಂದು ಸೆಮಿಫೈನಲ್‌ನಲ್ಲಿ, ದಕ್ಷಿಣ ಆಫ್ರಿಕಾ ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್‌ಗಳಿಂದ ಜಯಶಾಲಿಯಾದರು. 105 ರನ್ ಗಳಿಸಿದ ಆಸ್ಟ್ರೇಲಿಯಾ, 106 ರನ್‌ಗಳನ್ನು ದ.ಆಫ್ರಿಕಾದವರು 18.1 ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ನಷ್ಟಪಡಿಸಿ ಕಂತು ಫೈನಲ್ ಗೆ ಪ್ರವೇಶಿಸಿದ್ದಾರೆ.