Bailhongal, Belagavi : ಬೈಲಹೊಂಗಲ ಬಳಿಯ ಸುಕ್ಷೇತ್ರ ಇಂಚಲ (Inchal) ಗ್ರಾಮದ ಶ್ರೀ ಶಿವಯೋಗೀಶ್ವರ ಸಾಧು ಸಂಸ್ಥಾನಮಠದ ಬೆಳ್ಳಿ ರಜತ ರಥೋತ್ಸವ ಹಾಗೂ ಮಹಾರಥೋತ್ಸವ (Shri Shivayogi Sadhu Samsthana Matha Rathotsava) ಭಾನುವಾರ ಸಂಜೆ ಪೀಠಾಧಿಪತಿ ಶಿವಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶ್ರೀಮಠದ ಸಾವಿರಾರು ಭಕ್ತರ ನಡುವೆ ಸಂಭ್ರಮದಿಂದ ನಡೆಯಿತು.
ತಳೀರು ತೋರಣ, ಪುಷ್ಪಮಾಲೆಗಳಿಂದ ಶೃಂಗರಿಸಲಾಗಿದ್ದ ರಥೋತ್ಸವಕ್ಕೆ ಭಕ್ತರು ಹೂ , ಹಣ್ಣು, ಕಾರಿಕು ಸಮರ್ಪಿಸಿ, ಸದ್ಗುರು ಸಿದ್ಧಾರೂಢ, ಡಾ.ಶಿವಾನಂದ ಭಾರತಿ ಸ್ವಾಮೀಜಿಗಳಿಗೆ ಜಯ ಘೋಷ ಹಾಕಿ ರಥ ಎಳೆದು ತಮ್ಮ ಭಕ್ತಿ ತೋರಿದರು.
ಹಂಪಿ ವಿದ್ಯಾನಂದ ಭಾರತಿ ಸ್ವಾಮೀಜಿ, ಮಲ್ಲಾಪುರ ಚಿದಾನಂದ ಸ್ವಾಮೀಜಿ, ಪೂರ್ಣಾನಂದ ಸ್ವಾಮೀಜಿ ಸೇರಿದಂತೆ ವಿವಿಧೆಡೆಗಳ ಸ್ವಾಮೀಜಿಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.