Sidlaghatta, Chikkaballapur : ಬೀದಿ ನಾಯಿಗಳ (Street Dogs) ದಾಳಿಗೆ ತುತ್ತಾಗಿ ಮೃತಪಟ್ಟಿದ್ದ (Boy Death) ಖಲಂದರ್‌ಖಾನ್ ಪೋಷಕರಿಗೆ 2 ಲಕ್ಷ ರೂ ಪರಿಹಾರದ ಚೆಕ್‌ನ್ನು ನಗರಸಭೆ ಅಧ್ಯಕ್ಷೆ ಸುಮಿತ್ರಾ ರಮೇಶ್ (CMC President Smt. Sumitra Ramesh) ಶುಕ್ರವಾರ ವಿತರಿಸಿದರು.
ಕಳೆದ ಅಕ್ಟೋಬರ್ ತಿಂಗಳಿನಲ್ಲಿ ನಗರದ 18 ನೇ ವಾರ್ಡಿನ ಬಾಬಾಜಾನ್ ಎಂಬುವವರ 11 ವರ್ಷದ ಮಗ ಖಲಂದರ್ ಖಾನ್ ನ ಮೇಲೆ ಬೀದಿ ನಾಯಿಗಳು ನಡೆಸಿದ ದಾಳಿಯಿಂದ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದ. ಸ್ಥಳಕ್ಕೆ ಅಂದು ಭೇಟಿ ನೀಡಿದ್ದ ನಗರಸಭೆ ಅಧ್ಯಕ್ಷೆ ಸುಮಿತ್ರಾ ರಮೇಶ್ ಪರಿಹಾರ ನೀಡುವ ಭರವಸೆ ನೀಡಿದ್ದ ಹಿನ್ನಲೆಯಲ್ಲಿ ಶುಕ್ರವಾರ ನಗರಸಭೆ ನಿಧಿಯಿಂದ 2 ಲಕ್ಷ ರೂಗಳ ಪರಿಹಾರದ ಚೆಕ್‌ನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷೆ ಸುಮಿತ್ರಾ ರಮೇಶ್ ಮಾತನಾಡಿ, ನಗರಸಭೆಯಿಂದ ಇದೀಗ 2 ಲಕ್ಷ ರೂಗಳ ಪರಿಹಾರ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಈ ಕುಟುಂಬಕ್ಕೆ ಉಚಿತ ನಿವೇಶನ ಸೇರಿದಂತೆ ಮನೆ ನಿರ್ಮಿಸಿಕೊಳ್ಳಲು ಬೇಕಾದ ಎಲ್ಲಾ ಸವಲತ್ತುಗಳನ್ನು ಮಾಡಿಕೊಡಲಾಗುವುದು. ಇದೀಗ ನೀಡಿರುವ ಪರಿಹಾರದ ಹಣವನ್ನು ದುರುಪಯೋಗ ಪಡಿಸಿಕೊಳ್ಳದೇ ಉಳಿದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಳಸಿಕೊಳ್ಳುವಂತೆ ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಬಿ.ಎಸ್.ರಾಜೀವ್, ನಗರಸಭೆ ಪೌರಾಯುಕ್ತ ಆರ್.ಶ್ರೀಕಾಂತ್, ನಗರಸಭೆ ಸದಸ್ಯ ಶಬ್ಬೀರ್, ಸುರೇಶ್, ಮುಖಂಡರಾದ ಎಸ್.ಎಂ.ರಮೇಶ್, ಆಸೀಫ್, ನವೀನ್, ಸಮೀಉಲ್ಲಾ ಹಾಜರಿದ್ದರು.