Computers, laptops, mobile ಹಾಗು ಇತರ ಡಿಜಿಟಲ್ ಪರದೆಗಳನ್ನು (Digital Screen) ಹೆಚ್ಚು ಹೊತ್ತು ನೋಡುವುದರಿಂದ ಕಣ್ಣುಗಳಿಗೆ ಒತ್ತಡ ಬೀಳಬಹುದು. ಇದು ದೀರ್ಘಕಾಲ ನಿರಂತರವಾಗಿ ಪರದೆಯನ್ನು ನೋಡುವುದರಿಂದ ಉಂಟಾಗುವ ಸಾಮಾನ್ಯ ಸಮಸ್ಯೆಯಾಗಿದ್ದು, ಕೆಲವೊಮ್ಮೆ ಕಣ್ಣಿನ ಒಣಗುವಿಕೆ, ಕೆಂಪಾಗುವುದು, ಸುಳಿವು, ನೋವು ಅಥವಾ ತಲೆನೋವಿನಂತಹ ಸಮಸ್ಯೆಗಳಿಗೂ ಕಾರಣವಾಗಬಹುದು.
ಕಣ್ಣಿನ ಆಯಾಸ ತಡೆಯಲು ತಜ್ಞರ ಸಲಹೆಗಳು
- ಸರಿಯಾದ ಬೆಳಕಿನ ವ್ಯವಸ್ಥೆ
- ಪರದೆ ನೋಡುವಾಗ ಹೆಚ್ಚು ಪ್ರಕಾಶಮಾನವಾದ ಬೆಳಕು ಕಣ್ಣುಗಳಿಗೆ ತೊಂದರೆ ಉಂಟು ಮಾಡಬಹುದು.
- ನೇರ ಸೂರ್ಯನ ಬೆಳಕು ಅಥವಾ ಟ್ಯೂಬ್ ಲೈಟ್ ನೇರವಾಗಿ ಕಣ್ಣಿಗೆ ಬೀಳದಂತೆ ನೋಡಿಕೊಳ್ಳಿ.
- ಪರದಿಯ ಬೆಳಕಿನ ಸೆಟ್ಟಿಂಗ್‌ಗಳನ್ನು ಹೊಂದಿಸಿ.
- ಆ್ಯಂಟಿ–ಗ್ಲೇರ್ ಪರದೆ ಬಳಕೆ
- ಡಿಸ್ಪ್ಲೇ ಪರದೆಗೆ ಆ್ಯಂಟಿ-ಗ್ಲೇರ್ ಸ್ಕ್ರೀನ್ ಬಳಸದರೆ ಬೆಳಕಿನ ಪ್ರತಿಫಲನ ಕಡಿಮೆಯಾಗುತ್ತದೆ.
- ಕನ್ನಡಕ ಧರಿಸುವವರು ಪ್ರತಿಫಲನ ಕಡಿಮೆ ಮಾಡುವ ಲೇಪನ ಇರುವ ಕಣ್ಣಕಗಳನ್ನು ಬಳಸಬಹುದು.
- ವಿರಾಮ ತೆಗೆದುಕೊಳ್ಳಿ (20-20-20 ನಿಯಮ)
- ಪ್ರತಿ 20 ನಿಮಿಷಕ್ಕೊಮ್ಮೆ 20 ಸೆಕೆಂಡುಗಳ ಕಾಲ 20 ಅಡಿ ದೂರದ ವಸ್ತುವನ್ನು ನೋಡಿ.
- ಇದರಿಂದ ಕಣ್ಣಿನ ಸ್ನಾಯುಗಳು ವಿಶ್ರಾಂತಿ ಪಡೆಯುತ್ತವೆ.
- ಕಣ್ಣುಗಳನ್ನು ಮಿಟುಕಿಸಿ
- ನಿರಂತರವಾಗಿ ಪರದೆಯನ್ನು ನೋಡುವಾಗ ಕಣ್ಣು ಮಿಟುಕಿಸುವ ಪ್ರಮಾಣ ಕಡಿಮೆಯಾಗಬಹುದು, ಇದು ಒಣಗುವಿಕೆ ಹಾಗೂ ಕಿರಿಕಿರಿ ಉಂಟುಮಾಡುತ್ತದೆ.
- ಪ್ರತಿ 20 ನಿಮಿಷಕ್ಕೆ 10 ಬಾರಿ ನಿಧಾನವಾಗಿ ಕಣ್ಣು ಮಿಟುಕಿಸುವುದು ಒಳ್ಳೆಯದು.
- ಕಣ್ಣು ಮತ್ತು ಪರದೆ ನಡುವಿನ ಅಂತರ
- ಪರದೆ ಮತ್ತು ಕಣ್ಣುಗಳ ನಡುವೆ ಕನಿಷ್ಠ 20-24 ಇಂಚುಗಳ ಅಂತರ ಇರಲಿ.
- ಪರದಿಯ ಮೇಲ್ಭಾಗವು ಕಣ್ಣಿಗೆ ಹೋಲಿಸಿದರೆ 10-15 ಡಿಗ್ರಿ ಕೆಳಗಿರಬೇಕು.
- ಕಣ್ಣಿನ ಯೋಗ ಮತ್ತು ವ್ಯಾಯಾಮ
- ದೂರದ ವಸ್ತುಗಳನ್ನು ನೋಡುವುದು ಮತ್ತು ಹತ್ತಿರದ ವಸ್ತುಗಳ ಮೇಲೆ ಗಮನಹರಿಸುವುದು.
- ಇದು ಕಣ್ಣಿನ ಸ್ನಾಯುಗಳಿಗೆ ಆರೋಗ್ಯಕರ ವ್ಯಾಯಾಮವಾಗುತ್ತದೆ.
- ಕಣ್ಣಿನ ಆರೈಕೆ
- ಕಣ್ಣುಗಳು ಒಣಗಿದರೆ, ಕೃತಕ ಕಣ್ಣೀರಿ ಹನಿಗಳನ್ನು ಬಳಸಬಹುದು.
- ಕಣ್ಣಿನ ಸಮಸ್ಯೆಗಳು ತೀವ್ರವಾಗಿದ್ದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.
ಗಮನಿಸಿ: ಈ ಸಲಹೆಗಳು ಸಾಮಾನ್ಯ ಮಾಹಿತಿ ಮಾತ್ರ. ನಿಮ್ಮ ಕಣ್ಣಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯರ ಸಲಹೆ ಪಡೆಯುವುದು ಅಗತ್ಯ.