Home News RCB ವಿರುದ್ಧ ಗೆಲುವಿನ ಬಳಿಕ Siraj ಭಾವುಕರಾದರು

RCB ವಿರುದ್ಧ ಗೆಲುವಿನ ಬಳಿಕ Siraj ಭಾವುಕರಾದರು

Mohammed Siraj

RCB vs GT: ಕಳೆದ 7 ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಆಡುತ್ತಿದ್ದ ವೇಗದ ಬೌಲರ್ ಮೊಹಮ್ಮದ್ ಸಿರಾಜ್, (Mohammed Siraj) ಈ ಬಾರಿ ಗುಜರಾತ್ ಟೈಟಾನ್ಸ್ (GT) ತಂಡದ ಭಾಗವಾಗಿದ್ದಾರೆ. ಬುಧವಾರ ನಡೆದ RCB ವಿರುದ್ಧದ ಪಂದ್ಯದಲ್ಲಿ ಸಿರಾಜ್ 3 ವಿಕೆಟ್ ಪಡೆದು ಗುಜರಾತ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಸಿರಾಜ್ 4 ಓವರ್ ಬೌಲಿಂಗ್ ಮಾಡಿ ಕೇವಲ 19 ರನ್ ನೀಡಿ ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್ ಮತ್ತು ಲಿವಿಂಗ್ಸ್ಟೋನ್ ಅವರನ್ನು ಔಟ್ ಮಾಡಿದರು. ಈ ಸಾಧನೆಯಿಗಾಗಿ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು.

ಪಂದ್ಯದ ಬಳಿಕ ಭಾವುಕರಾಗಿ ಮಾತನಾಡಿದ ಸಿರಾಜ್, “RCB ಪರ 7 ವರ್ಷ ಆಡಿದ್ದೇನೆ. ನನ್ನ ಜೆರ್ಸಿ ಕೆಂಪಿನಿಂದ ನೀಲಿಗೆ ಬದಲಾಗಿದೆ. ಒಮ್ಮೆ ಮೈದಾನಕ್ಕೆ ಬಂದರೆ, ಗೆಲುವಿನಲ್ಲಷ್ಟೇ ಗಮನ ಇಡುವೆ” ಎಂದರು.

ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿರಾಮ ಪಡೆದಿದ್ದ ಸಮಯದಲ್ಲಿ ತಮ್ಮ ತಪ್ಪುಗಳ ಅರಿವು ಮಾಡಿಕೊಂಡು, ಹೆಚ್ಚಿನ ಫಿಟ್ನೆಸ್ ತರಬೇತಿ ನಡೆಸಿದ್ದಾರೆ ಎಂದು ಅವರು ಹೇಳಿದ್ದಾರೆ. ಆಶೀಷ್ ನೆಹರಾ ಅವರ ಮಾರ್ಗದರ್ಶನದಲ್ಲಿ ತಮ್ಮ ಬೌಲಿಂಗ್ ತಂತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸುತ್ತಿದ್ದಾರೆ. ಜೊತೆಗೆ ಹಿರಿಯ ಆಟಗಾರ ಇಶಾಂತ್ ಶರ್ಮಾ ಅವರೊಂದಿಗೆ ಲೈನ್ ಮತ್ತು ಲೆಂತ್ ಕುರಿತು ಚರ್ಚಿಸುತ್ತಿದ್ದಾರೆ.

RCB 169/8 (20) ಓವರ್ ಗಳಲ್ಲಿ ಸೀಮಿತವಾಗಿದ್ದರೆ, GT 170/2 (17.5) ಓವರ್ ಗಳಲ್ಲಿ ಗುರಿ ಮುಟ್ಟಿತು. ಸಾಯಿ ಸುದರ್ಶನ್ (49) ಮತ್ತು ಜಾಸ್ ಬಟ್ಲರ್ (73) ಅಜೇಯ ಪಾರಿ ಆಟವಾಡಿ ತಂಡಕ್ಕೆ ಜಯ ತಂದುಕೊಟ್ಟರು. ಈ ಜಯದೊಂದಿಗೆ ಗುಜರಾತ್ ಸತತ ಎರಡನೇ ಗೆಲುವು ದಾಖಲಿಸಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version