New Delhi: ಹೊಸ ಅಧ್ಯಯನದ ಪ್ರಕಾರ, ಧೂಮಪಾನವು(Smoking) ಟೈಪ್-2 ಮಧುಮೇಹಕ್ಕೆ ಕಾರಣವಾಗಬಹುದು.
ಈ ಅಧ್ಯಯನವು ಹೇಳುವುದೇನೆಂದರೆ – ಧೂಮಪಾನವು ಮಧುಮೇಹದ ನಾಲ್ಕು ವಿಧಗಳ ಬೆಳವಣಿಗೆಯನ್ನು ಹೆಚ್ಚು ಮಾಡುತ್ತದೆ.
ಮಧುಮೇಹಕ್ಕೆ ಸಾಮಾನ್ಯ ಕಾರಣಗಳು ಇನ್ಸುಲಿನ್ ಕೊರತೆ, ಇನ್ಸುಲಿನ್ ಪ್ರತಿರೋಧ, ಬೊಜ್ಜು ಮತ್ತು ವಯಸ್ಸು. ಆದರೆ, ಧೂಮಪಾನ ಮಾಡಿದರೆ ರೋಗ ಬರುವ ಅಪಾಯ ಇನ್ನಷ್ಟು ಹೆಚ್ಚುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
3,325 ಮಧುಮೇಹಿಗಳ ಮತ್ತು 3,897 ಮಧುಮೇಹವಿಲ್ಲದವರ ಮಾಹಿತಿ ಪರಿಶೀಲಿಸಿದಾಗ, ಧೂಮಪಾನ ಮಾಡುವವರಲ್ಲಿ ಮಧುಮೇಹ ಬರುವ ಸಾಧ್ಯತೆ ಧೂಮಪಾನ ಮಾಡದವರಿಗಿಂತ 2.15 ಪಟ್ಟು ಹೆಚ್ಚು ಎಂಬುದು ಬೆಳಕಿಗೆ ಬಂದಿದೆ.