back to top
24.7 C
Bengaluru
Wednesday, October 8, 2025
HomeNews6 ವರ್ಷಗಳ ನಂತರ ಅಗ್ರಸ್ಥಾನಕ್ಕೇರಿದ Smriti Mandhana

6 ವರ್ಷಗಳ ನಂತರ ಅಗ್ರಸ್ಥಾನಕ್ಕೇರಿದ Smriti Mandhana

- Advertisement -
- Advertisement -

ಟೀಮ್ ಇಂಡಿಯಾದ ಪ್ರಮುಖ ಆಟಗಾರ್ತಿ ಸ್ಮೃತಿ ಮಂಧಾನ (Smriti Mandhana) ಐಸಿಸಿ ಏಕದಿನ (ODI) ಬ್ಯಾಟರ್ಗಳ ರ್ಯಾಂಕಿಂಗ್‌ನಲ್ಲಿ 6 ವರ್ಷಗಳ ಬಳಿಕ ಮತ್ತೆ ಮೊದಲ ಸ್ಥಾನಕ್ಕೇರಿದ್ದಾರೆ. ಈ ಬಾರಿ 727 ಅಂಕಗಳನ್ನು ಗಳಿಸಿ ಟಾಪ್‌ ರ್ಯಾಂಕಿಂಗ್ ಪಡೆದುಕೊಂಡಿದ್ದಾರೆ.

ಈ ಹಿಂದೆ 2019ರಲ್ಲಿ ಸ್ಮೃತಿಗೆ ಮೊದಲ ಸ್ಥಾನ ಸಿಕ್ಕಿತ್ತು. ಆದರೆ ನಂತರ ಅಗ್ರಸ್ಥಾನ ಪಡೆಯಲಾಗಿರಲಿಲ್ಲ. ಇತ್ತೀಚೆಗೆ ನಡೆದ ಸೌತ್ ಆಫ್ರಿಕಾ ಮತ್ತು ಶ್ರೀಲಂಕಾ ತಂಡಗಳ ವಿರುದ್ಧದ ತ್ರಿಕೋಣ ಸರಣಿಯಲ್ಲಿ ಸ್ಮೃತಿಯ ಉತ್ತಮ ಬ್ಯಾಟಿಂಗ್ ನೆರವಿನಿಂದ ಈ ಸಾಧನೆ ಸಾಧ್ಯವಾಗಿದೆ.

ಟಾಪ್ 10 ರ್ಯಾಂಕಿಂಗ್ನಲ್ಲಿ ಭಾರತದ ಏಕೈಕ ಆಟಗಾರ್ತಿ: ಸ್ಮೃತಿಯನ್ನು ಹೊರತುಪಡಿಸಿ ಇತರ ಯಾವುದೇ ಭಾರತೀಯರು ಟಾಪ್-10 ರ್ಯಾಂಕಿಂಗ್‌ನಲ್ಲಿ ಇಲ್ಲ. ಇಂಗ್ಲೆಂಡಿನ ನಟಾಲಿ ಸ್ಕಿವರ್-ಬ್ರಂಟ್ (719 ಅಂಕ) ದ್ವಿತೀಯ ಸ್ಥಾನದಲ್ಲಿದ್ದರೆ, ಸೌತ್ ಆಫ್ರಿಕಾದ ಲಾರಾ ವೋಲ್ವಾರ್ಡ್ ಮೂರನೇ ಸ್ಥಾನದಲ್ಲಿದ್ದಾರೆ.

ಬಾಕಿ ಆಟಗಾರ್ತಿಯರ ಸ್ಥಾನ

  • ಆಮಿ ಜೋನ್ಸ್ (ಇಂಗ್ಲೆಂಡ್) – 682 ಅಂಕ – 4ನೇ ಸ್ಥಾನ
  • ಎಲ್ಲಿಸ್ ಪೆರ್ರಿ (ಆಸ್ಟ್ರೇಲಿಯಾ) – 684 ಅಂಕ – 5ನೇ ಸ್ಥಾನ
  • ಹೇಲಿ ಮ್ಯಾಥ್ಯೂಸ್ (ವೆಸ್ಟ್ ಇಂಡೀಸ್) – 682 ಅಂಕ – 6ನೇ ಸ್ಥಾನ
  • ಅಲೀಸಾ ಹೀಲಿ (ಆಸ್ಟ್ರೇಲಿಯಾ) – 679 ಅಂಕ – 7ನೇ ಸ್ಥಾನ
  • ಚಾಮರಿ ಅಥಾಪತ್ತು (ಶ್ರೀಲಂಕಾ) – 655 ಅಂಕ – 8ನೇ ಸ್ಥಾನ
  • ಬೆತ್ ಮೂನಿ (ಆಸ್ಟ್ರೇಲಿಯಾ) – 655 ಅಂಕ – 9ನೇ ಸ್ಥಾನ
  • ಆಶ್ ಗಾರ್ಡ್ನರ್ (ಆಸ್ಟ್ರೇಲಿಯಾ) – 650 ಅಂಕ – 10ನೇ ಸ್ಥಾನ

ಸ್ಮೃತಿ ಮಂಧಾನ ಟಿ20 ಬ್ಯಾಟರ್‌ಗಳ ರ್ಯಾಂಕಿಂಗ್‌ನಲ್ಲಿ ಕೂಡ 4ನೇ ಸ್ಥಾನದಲ್ಲಿದ್ದಾರೆ. ಟಾಪ್-10ರಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಆಟಗಾರ್ತಿ ಅಂದರೆ ಅವರು.

ಟಿ20 ರ‍್ಯಾಂಕಿಂಗ್ ಟಾಪ್ 5

  • ಬೆತ್ ಮೂನಿ (ಆಸ್ಟ್ರೇಲಿಯಾ) – 794 ಅಂಕ
  • ಹೇಲಿ ಮ್ಯಾಥ್ಯೂಸ್ (ವೆಸ್ಟ್ ಇಂಡೀಸ್) – 765 ಅಂಕ
  • ತಾಹ್ಲಿಯಾ ಮೆಕ್ಗ್ರಾಥ್ (ಆಸ್ಟ್ರೇಲಿಯಾ) – 757 ಅಂಕ
  • ಸ್ಮೃತಿ ಮಂಧಾನ (ಭಾರತ) – 753 ಅಂಕ
  • ಲಾರಾ ವೋಲ್ವಾರ್ಡ್ (ಸೌತ್ ಆಫ್ರಿಕಾ) – 737 ಅಂಕ

ಸ್ಮೃತಿ ಮಂಧಾನ ತಮ್ಮ ನಿರಂತರ ಶ್ರಮದಿಂದ ಇಡೀ ಭಾರತೀಯ ಮಹಿಳಾ ಕ್ರಿಕೆಟ್‌ಗೆ ಗೌರವ ತಂದಿದ್ದಾರೆ. ODI ಮತ್ತು T20 ರ‍್ಯಾಂಕಿಂಗ್‌ಗಳಲ್ಲಿ ಟಾಪ್‌ಪ್ಲೇಯರ್ ಆಗಿ ಮೂಡಿಬರುತ್ತಿರುವ ಸ್ಮೃತಿ ಭವಿಷ್ಯದಲ್ಲಿಯೂ ಬೃಹತ್ ಸಾಧನೆಗಳತ್ತ ದೌಡಾಯಿಸುತ್ತಿರುವುದು ಸ್ಪಷ್ಟ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page