New Delhi: ಸೋನಿಯಾ ಗಾಂಧಿ (Sonia Gandhi) ಅವರು ಭಾರತೀಯ ಪೌರತ್ವ ಪಡೆಯುವ ಮೊದಲುಲೇ ಕಾಂಗ್ರೆಸ್ ಪಕ್ಷವು ಅವರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿತ್ತು. ಬಿಜೆಪಿ ವಕ್ತಾರ ಅಮಿತ್ ಮಾಳವೀಯ ಅವರ ಪ್ರಕಾರ, ಇದು ದೇಶದ ಚುನಾವಣಾ ನಿಯಮ ಉಲ್ಲಂಘನೆ. ಸೋನಿಯಾ ಅವರು ಇಟಲಿಯ ಪ್ರಜೆಯಾಗಿದ್ದರೂ, 3 ವರ್ಷಗಳ ಮೊದಲೇ ಅವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿತ್ತು. 1982ರಲ್ಲಿ ಆ ಹೆಸರು ತೆಗೆದು, 1983 ಜನವರಿಯಲ್ಲಿ ಮತ್ತೆ ಸೇರಿಸಲಾಯಿತು. ಇದೇ ವರ್ಷದ ಏಪ್ರಿಲ್ 30ರಂದು ಅವರಿಗೆ ಭಾರತೀಯ ಪೌರತ್ವ ದೊರಕಿತು ಎಂದು ಬಿಜೆಪಿ ಆರೋಪಿಸಿದೆ.
ಕಾಂಗ್ರೆಸ್ ಸಂವಿಧಾನ ವಿರೋಧಿ ರೀತಿಯಲ್ಲಿ ನಡೆದುಕೊಂಡಿದೆ, ನಾಗರಿಕರಲ್ಲದವರಿಗೆ ಮತದಾನದ ಹಕ್ಕು ನೀಡಿದೆ.
ಇದಕ್ಕೆ ಕಾಂಗ್ರೆಸ್ ಪ್ರತಿಕ್ರಿಯಿಸಿ , ಸೋನಿಯಾ ಗಾಂಧಿ ಅವರು ಸ್ವತಃ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವಂತೆ ಕೇಳಿರಲಿಲ್ಲ, ತಪ್ಪು ಅಂದಿನ ಚುನಾವಣಾಧಿಕಾರಿಗಳಿಂದ ನಡೆದಿದೆ ಎಂದು ವಕ್ತಾರ ತಾರಿಕ್ ಅನ್ವರ್ ಹೇಳಿದ್ದಾರೆ. ಚುನಾವಣೆ ಆಯೋಗವು ಸ್ವತಂತ್ರವಾಗಿ ಕೆಲಸ ಮಾಡಬೇಕು, ಬಿಜೆಪಿ ಒತ್ತಡಕ್ಕೆ ಒಳಗಾಗಬಾರದು ಎಂದು ಕಾಂಗ್ರೆಸ್ ಒತ್ತಾಯಿಸಿದೆ.