Sony ಇಂಡಿಯಾ ತನ್ನ 1000X ಸೀರಿಸ್‌ನ ಹೊಸ wireless ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲೆಷನ್ (ANC) headphones WH-1000XM6 ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಹೆಡ್ಫೋನ್ಗಳನ್ನು ವಿಶೇಷವಾಗಿ ಪ್ರಯಾಣಿಕರು, ವೃತ್ತಿಪರರು ಮತ್ತು ಸಾಮಾನ್ಯ ಬಳಕೆದಾರರಿಗಾಗಿ ವಿನ್ಯಾಸಗೊಳಿಸಲಾಗಿದೆ. ಹೊಸ ಮಾದರಿ HD Noise Cancelling Processor QN3-ನೊಂದಿಗೆ ಬರುತ್ತದೆ.
WH-1000XM6 ಮೊದಲು ಜಾಗತಿಕವಾಗಿ ಮೇ 2025 ರಲ್ಲಿ ಪರಿಚಯಿಸಲ್ಪಟ್ಟಿತ್ತು. ಹೊಸ headphones ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲೆಷನ್, ಲಾಂಗ್ ಬ್ಯಾಟರಿ ಲೈಫ್ ಮತ್ತು ಅತ್ಯುತ್ತಮ ಆಡಿಯೊ ತಂತ್ರಜ್ಞಾನ ಹೊಂದಿವೆ. ಪ್ರೊಸೆಸರ್ ಹಿಂದಿನ ಮಾದರಿಗಿಂತ ವೇಗವಾಗಿ ಧ್ವನಿಯನ್ನು ಪ್ರಕ್ರಿಯೆಗೊಳಿಸುತ್ತದೆ. ಹೆಡ್ಫೋನ್ಗಳಲ್ಲಿ 12 ಮೈಕ್ರೊಫೋನ್ ಗಳು ಇದ್ದು, ಬಾಹ್ಯ ಶಬ್ದ ಪತ್ತೆ ಮತ್ತು ಶಬ್ದ ರದ್ದತಿಯನ್ನು ಸುಧಾರಿಸುತ್ತವೆ.
ಹೆಡ್‌ಬ್ಯಾಂಡ್ ವೀಗನ್ ಲೆದರ್ ಮತ್ತು ಅಗಲ ಪ್ಯಾಡಿಂಗ್‌ನೊಂದಿಗೆ ಮರು ವಿನ್ಯಾಸಗೊಂಡಿದ್ದು, ಇಯರ್ಪ್ಯಾಡ್ ಗಳು ಸ್ಟ್ರೆಚೆಬಲ್ ಮತ್ತು ಮೆಟಲ್ ಫೋಲ್ಡಿಂಗ್ ಮೆಕಾನಿಸಂ ಮೂಲಕ ಸುಲಭವಾಗಿ ಫೋಲ್ಡ್ ಮಾಡಬಹುದು. ಕೇಸ್ ಮ್ಯಾಗ್ನೆಟಿಕ್ ಕ್ಲೋಸರ್ ಹೊಂದಿದ್ದು, ತೆರೆಯಲು ಸುಲಭವಾಗಿದೆ.
WH-1000XM6 ಅಡಾಪ್ಟಿವ್ NC ಆಪ್ಟಿಮೈಜರ್ ನೊಂದಿಗೆ ಬಾಹ್ಯ ಶಬ್ದದ ಪ್ರಮಾಣವನ್ನು ಸ್ವಯಂಚಾಲಿತವಾಗಿ ಹೊಂದಿಸುತ್ತದೆ ಮತ್ತು ಗಾಳಿಯ ಒತ್ತಡಕ್ಕೆ ಹೊಂದಿಕೊಳ್ಳುತ್ತದೆ. ಆಂಬಿಯೆಂಟ್ ಸೌಂಡ್ ಮೋಡ್ update ಆಗಿದ್ದು, ಬಾಹ್ಯ ಶಬ್ದ ಮತ್ತು ಸಂಗೀತದ ಸಮತೋಲನ ಸುಧಾರಿತವಾಗಿದೆ.
headphones ಕಾರ್ಬನ್ ಫೈಬರ್ ಕಾಂಪೋಸಿಟ್ ಡೋಮ್ ಡ್ರೈವರ್ ಮತ್ತು ಹೆಚ್ಚಿನ ರೆಸಲ್ಯೂಶನ್ ಆಡಿಯೊ ಸಪೋರ್ಟ್ ಮಾಡುವ ಹೊಸ ವಾಯ್ಸ್ ಕಾಯಿಲ್ ಸ್ಟ್ರಕ್ಚರ್ ಹೊಂದಿವೆ. LDAC ಮೂಲಕ ವೈರ್ಡ್ ಮತ್ತು ವೈರ್ಲೆಸ್ ಮೋಡ್‌ನಲ್ಲಿ ಉತ್ತಮ ಧ್ವನಿಯನ್ನು ಅನುಭವಿಸಬಹುದು. DSEE ಎಕ್ಸ್ಟ್ರೀಮ್ ತಂತ್ರಜ್ಞಾನ ಕಂಪ್ರೆಸ್ಡ್ ಆಡಿಯೊ ಫೈಲ್ಗಳ ಗುಣಮಟ್ಟವನ್ನು ಸುಧಾರಿಸುತ್ತದೆ. 360 ರಿಯಾಲಿಟಿ ಆಡಿಯೊ ಮತ್ತು 10-ಬ್ಯಾಂಡ್ ಈಕ್ವಲೈಜರ್ ಸೇರಿದಂತೆ ವಿವಿಧ ಸೆಟ್ಟಿಂಗ್‌ಗಳನ್ನು ಸೋನಿ ಸೌಂಡ್ ಕನೆಕ್ಟ್ ಅಪ್ಲಿಕೇಶನ್‌ನಲ್ಲಿ ಹೊಂದಿಸಲಾಗಿದೆ.
Headphone ಗಳಲ್ಲಿ 6-ಮೈಕ್ರೊಫೋನ್ AI-ಆಧಾರಿತ ಬೀಮ್ಫಾರ್ಮಿಂಗ್ ವ್ಯವಸ್ಥೆ ಇದ್ದು, ಬಳಕೆದಾರರ ಧ್ವನಿಯನ್ನು ಪ್ರತ್ಯೇಕಿಸಿ ಹಿನ್ನೆಲೆ ಶಬ್ದವನ್ನು ಕಡಿಮೆ ಮಾಡುತ್ತದೆ. LE ಆಡಿಯೋ ಔರಾಕಾಸ್ಟ್, ಮಲ್ಟಿಪಾಯಿಂಟ್ ಕನೆಕ್ಟಿವಿಟಿ ಮತ್ತು ಲೋ-ಲೇಟೆನ್ಸಿ ಗೇಮಿಂಗ್‌ನ್ನು ಸಹ ಬೆಂಬಲಿಸುತ್ತದೆ. ಫಾಸ್ಟ್ ಚಾರ್ಜಿಂಗ್ ಮೂಲಕ ಕೇವಲ 3 ನಿಮಿಷಗಳ ಚಾರ್ಜಿಂಗ್ 3 ಗಂಟೆಗಳ ಪ್ಲೇಬ್ಯಾಕ್ ನೀಡುತ್ತದೆ.
ಬೆಲೆ: ಭಾರತೀಯ ಮಾರುಕಟ್ಟೆಯಲ್ಲಿ ರೂ. 39,990. ಬ್ಲ್ಯಾಕ್, ಪ್ಲಾಟಿನಂ ಸಿಲ್ವರ್ ಮತ್ತು ಮಿಡ್ನೈಟ್ ಬ್ಲೂ ಬಣ್ಣಗಳಲ್ಲಿ ಲಭ್ಯ. ಮಾರಾಟ ಸೆಪ್ಟೆಂಬರ್ 29ರಿಂದ ಆರಂಭವಾಗಿದೆ ಮತ್ತು ಗ್ರಾಹಕರು ShopatSC.com, ಸೋನಿ ಸೆಂಟರ್, ಅಮೆಜಾನ್, ಕ್ರೋಮಾ ಮತ್ತು ರಿಲಯನ್ಸ್ ಡಿಜಿಟಲ್ ಅಂಗಡಿಗಳಿಂದ ಖರೀದಿಸಬಹುದು.







