ಟೀಮ್ ಇಂಡಿಯಾ ಸ್ಟಾರ್‌ಗಳು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ (Rohit-Kohli) ಈಗಾಗಲೇ ಟಿ20 ಹಾಗೂ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಅವರು ಈಗ ಏಕದಿನ ಸ್ವರೂಪದಲ್ಲಿ ಮಾತ್ರ ಮುಂದುವರಿಯುತ್ತಿದ್ದಾರೆ. ಆದರೆ 2027ರ ವಿಶ್ವಕಪ್‌ಗೆ ಮುಂಚೆಯೇ ನಿವೃತ್ತಿ ಪಡೆಯಬಹುದು ಎಂಬ ವರದಿಗಳು ಬರುತ್ತಿವೆ.
ಈ ಅಕ್ಟೋಬರ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯೇ ಕೊಹ್ಲಿ ಮತ್ತು ರೋಹಿತ್ ಅವರ ಕೊನೆಯದಾಗಬಹುದು ಎಂದು ಹೇಳಲಾಗುತ್ತಿದೆ. ಬಿಸಿಸಿಐ ಈ ವಿಷಯಕ್ಕೆ ಸ್ಪಷ್ಟನೆ ನೀಡದೇ, ಮುಂದಿನ ಟಿ20 ವಿಶ್ವಕಪ್‌ಗೇ ನಮ್ಮ ಗಮನವಿದೆ ಎಂದು ಹೇಳಿದೆ.
ರಿಷಭ್ ಪಂತ್ ಅಥವಾ ಶುಭ್ಮನ್ ಗಿಲ್‌ರನ್ನು ಮುಂದಿನ ಏಕದಿನ ನಾಯಕನಾಗಿ ನೇಮಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.
ಸೌರವ್ ಗಂಗೂಲಿ, “ರೋಹಿತ್ ಮತ್ತು ಕೊಹ್ಲಿ ಫಾರ್ಮ್‌ನಲ್ಲಿ ಇದ್ದರೆ ಮುಂದುವರಿಯಬಹುದು. ಆಸ್ಟ್ರೇಲಿಯಾ ಸರಣಿ ಕೊನೆಯದಾಗಬಹುದು ಎಂಬ ವರದಿಗಳ ಬಗ್ಗೆ ನನಗೆ ಮಾಹಿತಿ ಇಲ್ಲ. ಉತ್ತಮ ಆಟಗಾರರು ತಂಡದಲ್ಲಿ ಮುಂದುವರಿಯುತ್ತಾರೆ” ಎಂದರು. ಅವರು ಏಷ್ಯಾಕಪ್‌ನಲ್ಲಿ ಭಾರತವೇ ಫೇವರಿಟ್ ಎಂದು ಅಭಿಪ್ರಾಯ ಪಟ್ಟರು.
ಟೆಸ್ಟ್ ಸರಣಿಯ ಬಳಿಕ ಆಟಗಾರರು ವಿಶ್ರಾಂತಿಯಲ್ಲಿ ಇದ್ದಾರೆ. ಸೆಪ್ಟೆಂಬರ್ 9ರಿಂದ ದುಬೈನಲ್ಲಿ ಏಷ್ಯಾಕಪ್ ಆರಂಭ. ನಂತರ ಅಕ್ಟೋಬರ್ 19ರಿಂದ ಆಸ್ಟ್ರೇಲಿಯಾ ಪ್ರವಾಸ – ಮೂರು ಏಕದಿನಗಳು. ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತವರು ನೆಲದಲ್ಲಿ ಆಡಲಿದೆ.
ರೋಹಿತ್ ಮತ್ತು ಕೊಹ್ಲಿ 2027ರ ವಿಶ್ವಕಪ್ ಬಗ್ಗೆ ಇನ್ನೂ ಏನೂ ಹೇಳಿಲ್ಲ. ಆದರೆ ಆಸ್ಟ್ರೇಲಿಯಾ ಪ್ರವಾಸದ ನಂತರ ಅವರು ನಿವೃತ್ತಿ ಘೋಷಿಸಿದರೆ ಹೇಗೆ? ಎಂಬ ಆತಂಕ ಅಭಿಮಾನಿಗಳನ್ನು ಕಾಡುತ್ತಿದೆ.