back to top
25.2 C
Bengaluru
Friday, July 18, 2025
HomeKarnatakaCaste Census Report ಬಗ್ಗೆ ಏಪ್ರಿಲ್ 17ರಂದು Special Cabinet Meeting

Caste Census Report ಬಗ್ಗೆ ಏಪ್ರಿಲ್ 17ರಂದು Special Cabinet Meeting

- Advertisement -
- Advertisement -

Bengaluru: ಕರ್ನಾಟಕದಲ್ಲಿ 2015ರಲ್ಲಿ ಹಿಂದುಳಿದ ವರ್ಗಗಳ ಆಯೋಗ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆಧಾರಿತ ಜಾತಿ ಗಣತಿ ವರದಿ (Caste Census report) ಕುರಿತು ಮಹತ್ವದ ಚರ್ಚೆ ಶುಕ್ರವಾರದ ಸಚಿವ ಸಂಪುಟ ಸಭೆಯಲ್ಲಿ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಈ ವರದಿಯನ್ನು ಜಾರಿಗೆ ತರುವ ಬಗ್ಗೆ ministers‌ಗಳು ಚರ್ಚೆ ನಡೆಸಿದರು. ಅಂತಿಮ ತೀರ್ಮಾನವನ್ನು ಮುಂದಿನ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ.

ಈ ಸಭೆಯಲ್ಲಿ ಲಕೋಟೆಯಲ್ಲಿ ಬಂದಿದ್ದ ವರದಿಯ ದತ್ತಾಂಶವನ್ನು ಸಚಿವರಿಗೆ ನೀಡಲಾಯಿತು. ನಂತರ ಈ ವಿಷಯವಾಗಿ ಸುದೀರ್ಘ ಚರ್ಚೆ ನಡೆಯಿತು. ಎಲ್ಲರ ಅಭಿಪ್ರಾಯ ಪಡೆದುಕೊಂಡ ಸಿಎಂ ಸಿದ್ದರಾಮಯ್ಯ, ಏಪ್ರಿಲ್ 17ರಂದು ವಿಶೇಷ ಸಂಪುಟ ಸಭೆ ನಡೆಯಲಿ ಎಂದು ತೀರ್ಮಾನಿಸಿದರು.

ವರದಿಯಲ್ಲಿರುವ ಮಾಹಿತಿಗಳು, ಪೆಟ್ಟಿಗೆ 1

  • 2015ರ ಸಮೀಕ್ಷೆಯ ಸಂಪೂರ್ಣ ವರದಿ
  • ಜಾತಿಗಳಂತೆ ಜನಸಂಖ್ಯೆ ವಿವರ – 1 ಸಂಪುಟ
  • ಪರಿಶಿಷ್ಟ ಜಾತಿಗಳ ಲಕ್ಷಣಗಳು – 1 ಸಂಪುಟ
  • ಪರಿಶಿಷ್ಟ ಪಂಗಡಗಳ ಲಕ್ಷಣಗಳು – 1 ಸಂಪುಟ
  • ಇತರೆ ಜಾತಿ-ವರ್ಗಗಳ ಮಾಹಿತಿ (SC/ST ಹೊರತುಪಡಿಸಿ) – 7 ಸಂಪುಟಗಳು
  • ವಿಧಾನಸಭಾ ಕ್ಷೇತ್ರದ ಜಾತಿ ವಿವರಗಳು – 2 ಸಿ.ಡಿಗಳು
  • ದತ್ತಾಂಶ ಅಧ್ಯಯನ ವರದಿ (2024)
  • ಪೆಟ್ಟಿಗೆ 2
  • ಜಾತಿ-ವರ್ಗದ ಆಧಾರದ ಮೇಲೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮಾಹಿತಿ (SC/ST ಹೊರತುಪಡಿಸಿ) – 4 ಸಂಪುಟಗಳು
  • ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮಾಹಿತಿ – 1 ಸಂಪುಟ
  • ತಾಲೂಕು ಹಾಗೂ ಜಾತಿ ಪ್ರಕಾರ ಕುಟುಂಬ ಹಾಗೂ ಜನಸಂಖ್ಯೆ – 30 ಸಂಪುಟಗಳು
  • ಶಿಕ್ಷಣ, ಉದ್ಯೋಗ, ರಾಜಕೀಯ ಭಾಗವಹಿಸುವಿಕೆ ಕುರಿತ ದ್ವಿತೀಯ ಮೂಲದ ಮಾಹಿತಿ – 1 ಸಂಪುಟ

ಈ ನಡುವೆ, ಜಾತಿ ಗಣತಿ ವಿಷಯದ ಬಗ್ಗೆ ಪ್ರತಿಪಕ್ಷಗಳು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ. “ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನಕ್ಕೆ ಭೀತಿ ಉಂಟಾದಾಗಲೆಲ್ಲಾ ಅವರಿಗೆ ಈ ವರದಿ ನೆನಪಾಗುತ್ತದೆ,” ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page