back to top
26.3 C
Bengaluru
Friday, July 18, 2025
HomeKarnatakaRevenue Courtಗಳಲ್ಲಿ ತ್ವರಿತ ಪ್ರಕರಣ ವಿಲೇವಾರಿ

Revenue Courtಗಳಲ್ಲಿ ತ್ವರಿತ ಪ್ರಕರಣ ವಿಲೇವಾರಿ

- Advertisement -
- Advertisement -

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಂದಾಯ ಇಲಾಖೆಯ (Revenue court) ಪ್ರಗತಿ ಪರಿಶೀಲನಾ ಸಭೆಯಲ್ಲಿ, ಹತ್ತು ವರ್ಷಗಳಿಗಿಂತ ಹಳೆಯ ಭೂ ಪ್ರಕರಣಗಳನ್ನು ತ್ವರಿತವಾಗಿ ಪರಿಹರಿಸುವ ಬಗ್ಗೆ ಚರ್ಚಿಸಿದರು. ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿ ನ್ಯಾಯಾಲಯಗಳಲ್ಲಿ ಪ್ರಕರಣಗಳ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಿರುವುದಾಗಿ ತಿಳಿಸಲಾಯಿತು. ಡಿಜಿಟಲೀಕರಣ ಮತ್ತು ಆಧಾರ್ ಸಂಯೋಜನೆಯಿಂದ ಭೂ ದಾಖಲೆಗಳ ಭದ್ರತೆ ಹೆಚ್ಚಾಗಿದೆ. ಭವಿಷ್ಯದಲ್ಲಿ ಪ್ರಕರಣಗಳ ವಿಲೇವಾರಿ ವೇಗ ಮತ್ತು ಗುಣಮಟ್ಟವನ್ನು ಮತ್ತಷ್ಟು ಸುಧಾರಿಸಲು ಒತ್ತು ನೀಡಲಾಯಿತು.

ಒಂದೂವರೆ ವರ್ಷದಲ್ಲಿ ಬಾಕಿ ಪ್ರಕರಣಗಳ ವಿಲೇವಾರಿ: ಮೂದಲು 10 ವರ್ಷ, 5 ವರ್ಷಕ್ಕೂ ಹೆಚ್ಚು ಕಾಲ ಬಾಕಿ ಇದ್ದ 10,000ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಈಗ ಕೇವಲ 369 ಮಾತ್ರ ಉಳಿದಿವೆ.

ಗುಣಮಟ್ಟದ ವಿಲೇವಾರಿಗೆ ಒತ್ತಾಯ: ಕೇವಲ ಪ್ರಮಾಣ ಹೆಚ್ಚಳವಲ್ಲ, ಉತ್ತಮ ಗುಣಮಟ್ಟದ ವಿಲೇವಾರಿ ಮಾಡಲು ಕಂದಾಯ ಸಚಿವ ಕೃಷ್ಣಬೈರೇಗೌಡರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ.

ಖಾತೆ ಬದಲಾವಣೆ ಒಂದು ದಿನದಲ್ಲೇ: ಶೇ.65 ಪ್ರಕರಣಗಳ ಖಾತೆ ಬದಲಾವಣೆ ಪ್ರಕ್ರಿಯೆ ಒಂದೇ ದಿನದಲ್ಲಿ ಪೂರ್ಣಗೊಳ್ಳುತ್ತಿದೆ.

ಭೂ ಪರಿವರ್ತನೆ ತ್ವರಿತಗೊಳಿಸಲು ಆದೇಶ: ಭೂ ಪರಿವರ್ತನೆಯ ಸಂಪೂರ್ಣ ಪ್ರಕ್ರಿಯೆ ಒಂದು ತಿಂಗಳ ಒಳಗೆ ಪೂರ್ಣಗೊಳಿಸುವಂತೆ ಸಿಎಂ ಆದೇಶ. ಮಾಸ್ಟರ್ ಪ್ಲಾನ್ ಇರುವ ಪ್ರದೇಶದಲ್ಲಿ ಭೂ ಪರಿವರ್ತನೆ ಅಗತ್ಯವಿಲ್ಲ.

ನ್ಯಾಯಾಲಯ ಕಾರ್ಯವೈಖರಿ ಸುಧಾರಣೆ: ತಹಶೀಲ್ದಾರ್ ನ್ಯಾಯಾಲಯಗಳಲ್ಲಿ ಮೂರು ತಿಂಗಳ ಒಳಗೆ, ಜಿಲ್ಲಾಧಿಕಾರಿ ನ್ಯಾಯಾಲಯಗಳಲ್ಲಿ ಒಂದು ವರ್ಷದಲ್ಲಿ ಶೇ.36 ಪ್ರಕರಣಗಳ ವಿಲೇವಾರಿ. ಉಪ ವಿಭಾಗಾಧಿಕಾರಿ ನ್ಯಾಯಾಲಯಗಳಲ್ಲಿ ತಾಂತ್ರಿಕ ಕಾರಣಗಳಿಂದ ವಿಳಂಬ – ಇದು ಸರಿಪಡಿಸಲು ಸಿಎಂ ಖಡಕ್ ಸೂಚನೆ.

ಭೂಮಿಗಾಗಿ ಆಧಾರ್ ಲಿಂಕ್: 2.22 ಕೋಟಿ ಖಾತೆಗಳಿಗೆ ಆಧಾರ್ ಲಿಂಕ್ ಮಾಡಿ ನಕಲಿ ದಾಖಲೆ ತಡೆಯುವ ಕ್ರಮ.

ಅನಧಿಕೃತ ಬಡಾವಣೆ ವಿರುದ್ಧ ಕ್ರಮ: ಖಾತಾ ಮಂಜೂರಿಗೆ ನಿಗದಿತ ಅವಧಿ, ಮುಂದಿನ ಅನಧಿಕೃತ ಬಡಾವಣೆ ತಡೆಯಲು ಕಟ್ಟುನಿಟ್ಟಾದ ನಿಯಂತ್ರಣ.

ಭೂ ಸುರಕ್ಷಾಜಾರಿಗೆ ಒತ್ತಾಯ: 8 ಕೋಟಿ ಮೂಲ ದಾಖಲೆಗಳ ಡಿಜಿಟಲ್ ಭದ್ರತೆ, ದಾಖಲೆ ತಿದ್ದುಪಡಿ ತಪ್ಪಿಸಲು ಕ್ರಮ.

ಡ್ರೋನ್ ಸರ್ವೆ ಮೂಲಕ ಭೂಮಾಪನ: 21 ಜಿಲ್ಲೆಗಳಲ್ಲಿ ಪ್ರಾರಂಭ, ಉಳಿದ ಜಿಲ್ಲೆಗಳಿಗೂ ಶೀಘ್ರದಲ್ಲೇ ವಿಸ್ತರಣೆ.

ಸರ್ಕಾರಿ ಜಮೀನು ಜಪ್ತಿಗೆ ಪರಿಹಾರ ಯೋಜನೆ: ಹಲವಾರು ವರ್ಷಗಳಿಂದ ರೈತರು ಉಪಯೋಗಿಸುತ್ತಿರುವ ಸರ್ಕಾರಿ ಜಮೀನಿನ ಬಗ್ಗೆ ಪರಿಹಾರ ಯೋಜನೆ ಪ್ರಸ್ತಾವನೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page