New Delhi: ದೇಶದ ಕ್ರೀಡಾ ಆಡಳಿತದಲ್ಲಿ ಪಾರದರ್ಶಕತೆ ತರಲು ಉದ್ದೇಶಿಸಿದ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ (Sports Bill) ಲೋಕಸಭೆಯಲ್ಲಿ (Lok Sabha) ಅಂಗೀಕಾರಗೊಂಡಿದೆ. ಶೀಘ್ರದಲ್ಲೇ ರಾಜ್ಯಸಭೆಯಲ್ಲೂ ಪಾಸ್ ಆಗಿ ಕಾಯ್ದೆಯಾಗುವ ನಿರೀಕ್ಷೆಯಿದೆ.
ಈ ಮಸೂದೆ ಜಾರಿಗೆ ಬಂದರೆ, ಖಾಸಗಿ ಸಂಸ್ಥೆಯಾಗಿರುವ ಬಿಸಿಸಿಐ ಕೂಡ ಸರ್ಕಾರದ ನಿಯಂತ್ರಣಕ್ಕೆ ಒಳಪಡಲಿದೆ. ಇತರೆ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೆ ಅನ್ವಯಿಸುವ ನಿಯಮಗಳು ಬಿಸಿಸಿಐಗೂ ಅನ್ವಯವಾಗುತ್ತವೆ.
ಮಸೂದೆಯ ಮುಖ್ಯ ಅಂಶಗಳು
- ರಾಷ್ಟ್ರೀಯ ಕ್ರೀಡಾ ಮಂಡಳಿ (NNB) ರಚನೆ
- ರಾಷ್ಟ್ರೀಯ ಕ್ರೀಡಾ ನ್ಯಾಯಾಧಿಕರಣ (NST) ಸ್ಥಾಪನೆ
- ರಾಷ್ಟ್ರೀಯ ಕ್ರೀಡಾ ಚುನಾವಣಾ ಪ್ಯಾನೆಲ್ ನಿರ್ಮಾಣ
- ಕ್ರೀಡಾಪಟುಗಳ ಆಯ್ಕೆ, ಚುನಾವಣೆ ವಿವಾದ, ಆಡಳಿತ ಹಾಗೂ ಹಣಕಾಸು ದುರುಪಯೋಗದ ಪ್ರಕರಣಗಳಿಗೆ ವಿಶೇಷ ನ್ಯಾಯಾಧಿಕರಣ
- ತೀರ್ಪುಗಳನ್ನು ಕೇವಲ ಸುಪ್ರೀಂ ಕೋರ್ಟ್‌ನಲ್ಲಿ ಮಾತ್ರ ಪ್ರಶ್ನಿಸಲು ಅವಕಾಶ
ಬಿಸಿಸಿಐ ಮೇಲೆ ಪರಿಣಾಮ: ಬಿಸಿಸಿಐ ತನ್ನ ವಾರ್ಷಿಕ ಮಾನ್ಯತೆಗಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಬೇಕು. ಯಾವುದೇ ವಿವಾದದಲ್ಲಿ ನೇರವಾಗಿ ನ್ಯಾಯಾಲಯಕ್ಕೆ ಹೋಗುವ ಮೊದಲು ರಾಷ್ಟ್ರೀಯ ಕ್ರೀಡಾ ನ್ಯಾಯಾಧಿಕರಣವನ್ನು ಸಂಪರ್ಕಿಸುವುದು ಕಡ್ಡಾಯವಾಗಲಿದೆ.