ಶ್ರೀಲಂಕಾದ ದೇಶೀಯ ಕ್ರಿಕೆಟಿಗ ಸಲಿಯಾ ಸಮನ್ (Saliha Saman) ಅವರನ್ನು ಎಲ್ಲಾ ರೀತಿಯ ಕ್ರಿಕೆಟ್‌ನಿಂದ 5 ವರ್ಷಗಳ ಕಾಲ ನಿಷೇಧಿಸಲು ಐಸಿಸಿ ಆದೇಶ ಹೊರಡಿಸಿದೆ.
2021ರ ಅಬುಧಾಬಿ T10 ಲೀಗ್ ವೇಳೆ ಮ್ಯಾಚ್ ಫಿಕ್ಸಿಂಗ್ ಮಾಡಲು ಯತ್ನಿಸಿದ್ದರೆಂಬ ಆರೋಪ ಸಾಬೀತಾಗಿದೆ.
- ಆಟಗಾರರಿಗೆ ಹಣ, ಉಡುಗೊರೆ ಕೊಟ್ಟು ಮ್ಯಾಚ್ ಫಿಕ್ಸಿಂಗ್ ಮಾಡಲು ಪ್ರೇರೇಪಿಸಿದ್ದರು.
- ಪಂದ್ಯಗಳ ಫಲಿತಾಂಶದ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ್ದರು.
- ಭ್ರಷ್ಟಾಚಾರ ವಿರೋಧಿ ಸಂಹಿತೆ ಉಲ್ಲಂಘಿಸಿದ್ದರು.
ಐಸಿಸಿ ನಿರ್ಧಾರ
- ನಿಷೇಧವು ಸೆಪ್ಟೆಂಬರ್ 13, 2023ರಿಂದ ಜಾರಿಗೆ ಬಂದಿದೆ.
- ಆರ್ಟಿಕಲ್ 2.1.1, 2.1.3 ಮತ್ತು 2.1.4 ಅಡಿ ತಪ್ಪಿತಸ್ಥರೆಂದು ಘೋಷಿಸಲಾಗಿದೆ.
ಸಲಿಯಾ ಸಮನ್ ಕ್ರಿಕೆಟ್ ವೃತ್ತಿ
- 101 ಪ್ರಥಮ ದರ್ಜೆ ಪಂದ್ಯಗಳಲ್ಲಿ 3,622 ರನ್, 271 ವಿಕೆಟ್.
- 77 ಲಿಸ್ಟ್-ಎ ಪಂದ್ಯಗಳಲ್ಲಿ 898 ರನ್, 84 ವಿಕೆಟ್.
- 47 ಟಿ20 ಪಂದ್ಯಗಳಲ್ಲಿ 678 ರನ್, 58 ವಿಕೆಟ್.
- ಶ್ರೀಲಂಕಾ ರಾಷ್ಟ್ರೀಯ ತಂಡಕ್ಕೆ ಆಡದಿದ್ದರೂ, ದೇಶೀಯ ಕ್ರಿಕೆಟ್‌ನಲ್ಲಿ ಹೆಸರಾಂತ ಆಲ್ರೌಂಡರ್.







