back to top
20.5 C
Bengaluru
Tuesday, October 28, 2025
HomeKarnatakaನಾಳೆಯಿಂದ SSLC Exam: ಕೊನೆಯ ದಿನದ ತಯಾರಿ ಹೇಗಿರಬೇಕು?

ನಾಳೆಯಿಂದ SSLC Exam: ಕೊನೆಯ ದಿನದ ತಯಾರಿ ಹೇಗಿರಬೇಕು?

- Advertisement -
- Advertisement -


SSLC ವಿದ್ಯಾರ್ಥಿಗಳ ಜೀವನದಲ್ಲಿ ತುಂಬಾ ಮಹತ್ವದ ಹಂತವಾಗಿದೆ. ವೃತ್ತಿಜೀವನದ ಬುನಾದಿ ಈ ಹಂತದಲ್ಲಿ ಇಡಲಾಗುತ್ತದೆ. ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಸರಿಯಾದ ತಯಾರಿಯ ಅಗತ್ಯವಿದೆ. ನಾಳೆಯಿಂದ SSLC ಪರೀಕ್ಷೆಗಳು ಆರಂಭವಾಗುತ್ತಿರುವುದರಿಂದ, ಕೊನೆಯ ದಿನದ ಸಿದ್ಧತೆಯ ಬಗ್ಗೆ ಕೆಲವು ಮುಖ್ಯ ಸಲಹೆಗಳು.

ಕೊನೆಯ ಹಂತದ ತಯಾರಿ ಸಲಹೆಗಳು

  • ಪರೀಕ್ಷೆಗೆ ಒಂದು ದಿನ ಬಾಕಿಯಿರುವಾಗಲೇ ಮೊದಲ ದಿನ ಯಾವ ವಿಷಯದ ಪರೀಕ್ಷೆ ಇದೆ ಎಂದು ಖಚಿತಪಡಿಸಿಕೊಳ್ಳಿ.
  • ಓದಿದ ವಿಷಯಗಳ ಮುಖ್ಯ ಅಂಶಗಳನ್ನು ಕಿರುಟಿಪ್ಪಣಿ ಮಾಡಿಕೊಂಡಿದ್ದರೆ, ಒಮ್ಮೆ ಕಣ್ಣಾಯಿಸಿ ಮನನ ಮಾಡಿಕೊಳ್ಳಿ.
  • ಆತ್ಮವಿಶ್ವಾಸ ಉಳಿಸಿಕೊಳ್ಳಿ—ಪರೀಕ್ಷೆ ಚೆನ್ನಾಗಿ ಬರೆಯುವೆ ಎಂದು ನಿಮ್ಮನ್ನು ನಂಬಿಕೊಳ್ಳಿ.
  • ಪ್ರವೇಶ ಪತ್ರ ಹಾಗೂ ಲೇಖನ ಸಾಮಗ್ರಿಗಳನ್ನು ಬ್ಯಾಗ್‌ನಲ್ಲಿ ಸಿದ್ಧವಾಗಿಡಿ.
  • ಆರೋಗ್ಯದ ಬಗ್ಗೆ ಕಾಳಜಿ ವಹಿಸಿ—ನಿದ್ರೆ ಕಡಿಮೆ ಮಾಡಬೇಡಿ, ಆರೋಗ್ಯಕರ ಆಹಾರ ಸೇವಿಸಿ.
  • ರಾತ್ರಿ ಬೇಗ ಮಲಗಿ, ಬೆಳಗ್ಗೆ ತಾಜಾತನದಿಂದ ಎದ್ದು ಓದಿದ ವಿಷಯಗಳನ್ನು ಪುನರವಲೋಕನ ಮಾಡಿ.

ಪರೀಕ್ಷಾ ದಿನ ಪಾಲಿಸಬೇಕಾದ ಅಂಶಗಳು

  • ಬೆಳಗ್ಗೆ ಬೇಗನೆ ಎದ್ದು, ಪರೀಕ್ಷೆಗೆ ಬೇಕಾದ ಎಲ್ಲ ಸಾಮಗ್ರಿಗಳನ್ನು ಒಮ್ಮೆ ಪರಿಶೀಲಿಸಿ.
  • ಮನೆಯ ಹಿರಿಯರ ಆಶೀರ್ವಾದ ಪಡೆದು, ಪರೀಕ್ಷಾ ಕೇಂದ್ರಕ್ಕೆ ಸಮಯೋಚಿತವಾಗಿ ಹೋಗಿ.
  • ಪರೀಕ್ಷಾ ಕೇಂದ್ರಕ್ಕೆ ಕನಿಷ್ಠ ಒಂದು ಗಂಟೆ ಮುಂಚಿತವಾಗಿ ತಲುಪುವುದು ಉತ್ತಮ.
  • ಹಾಲ್ ಟಿಕೆಟ್ ಹಾಗೂ ಲಿಖಿತ ಸಾಮಗ್ರಿಗಳನ್ನು ಸರಿಯಾಗಿ ಹೊಂದಿಸಿ.
  • ಉತ್ತರಪತ್ರಿಕೆ ಪಡೆದುಕೊಂಡ ಬಳಿಕ ನೋಂದಣಿ ಸಂಖ್ಯೆಯನ್ನು ಸರಿಯಾಗಿ ಬರೆಯಿರಿ.
  • ಪ್ರಶ್ನೆ ಪತ್ರಿಕೆ ಪಡೆದ ನಂತರ ಮೊದಲು ಸಂಪೂರ್ಣ ಓದಿ, ಗೊತ್ತಿರುವ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಬರೆಯಿರಿ.

ಶುಭವಾಗಲಿ!

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page