back to top
24.4 C
Bengaluru
Thursday, October 9, 2025
HomeHealthStar Fruit: ಹಣ್ಣಿನ ಆರೋಗ್ಯದ ಮಹತ್ವ

Star Fruit: ಹಣ್ಣಿನ ಆರೋಗ್ಯದ ಮಹತ್ವ

- Advertisement -
- Advertisement -

ತಿನ್ನಲು ಹುಳಿಯಾಗಿರುವ ನಕ್ಷತ್ರ ಹಣ್ಣಿನಲ್ಲಿ (Star Fruit) ಹಲವು ರೀತಿಯ ಆರೋಗ್ಯ ಪ್ರಯೋಜನಗಳಿವೆ. ಈ ಮರವೊಂದು ಮನೆಯಲ್ಲಿ ಇದ್ದರೆ ಔಷಧಗಳಿಂದ ವಾಸಿ ಮಾಡಲು ಸಾಧ್ಯವಾಗದಿರುವ ರೋಗವನ್ನು ಕೂಡ ಗುಣಪಡಿಸಬಹುದು. ಆ ಶಕ್ತಿ ಈ ಹಣ್ಣಿನಲ್ಲಿದೆ. ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಕೂಡ ಜಾಸ್ತಿಯಾಗುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ: ಸ್ಟಾರ್ ಫ್ರೂಟ್‌ನಲ್ಲಿ ಫ್ಲೇವನಾಯ್ಡ್ ಗಳು, ಪ್ರೊಯಾಂಥೋಸಯಾನಿಡಿನ್ ಗಳು, ಬೀಟಾ-ಕ್ಯಾರೋಟಿನ್ ಮತ್ತು ಗ್ಯಾಲಿಕ್ ಆಮ್ಲಗಳು ಮುಂತಾದಂತಹ ಪೋಷಕಾಂಶಗಳು ಇದ್ದು, ಈ ರೀತಿ ಸಮೃದ್ಧ ಆಹಾರವನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡಬಹುದು. ಇದು ಹೃದಯ ಮತ್ತು ನರಕೋಶ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹೃದಯದ ಆರೋಗ್ಯ: ಸ್ಟಾರ್ ಫ್ರೂಟ್‌ನಲ್ಲಿ ಇರುವ ಫೈಬರ್ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದರ ಜೊತೆಗೆ ಇದು ಹೃದಯದ ಆರೋಗ್ಯವನ್ನು ಉತ್ತಮಗೊಳಿಸಲು, ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು.

ಕ್ಯಾನ್ಸರ್ ನಂತಹ ರೋಗಗಳನ್ನು ತಡೆಯುತ್ತದೆ: ಸ್ಟಾರ್ ಫ್ರೂಟ್‌ನಲ್ಲಿರುವ ವಿಟಮಿನ್ C, ಅತ್ಯುತ್ತಮ ಉತ್ಕರ್ಷಣ ನಿರೋಧಕ ಗುಣವನ್ನು ಹೊಂದಿದ್ದು, ಕ್ಯಾನ್ಸರ್ ನಂತಹ ಕಾಯಿಲೆಗಳಿಗೆ ಪ್ರತಿರೋಧ ನೀಡಲು ಸಹಾಯ ಮಾಡುತ್ತದೆ. ಇದರ ಸೇವನೆಯಿಂದ ಸ್ತನ, ಗುಲ್ಮೋಹರ, ಗ್ಯಾಸ್ಟ್ರಿಕ್, ಶ್ವಾಸಕೋಶ, ಪ್ಯಾಂಕ್ರಿಯಾಟಿಕ್, ಪ್ರಾಸ್ಟೇಟ್ ಕ್ಯಾನ್ಸರ್‌ಗಳು ಕಡಿಮೆಯಾಗಬಹುದು.

ಸ್ಟಾರ್ ಫ್ರೂಟ್ ಸೇವನೆಯಿಂದ ಒಟ್ಟಾರೆ ಆರೋಗ್ಯದಲ್ಲಿ ಹೆಚ್ಚಿನ ಲಾಭವನ್ನು ಪಡೆಯಬಹುದು.

ಸೂಚನೆ: ಈ ಮಾಹಿತಿಯು ಸಾಮಾನ್ಯ ಮಾಹಿತಿ ಮಾತ್ರ, ವೈದ್ಯಕೀಯ ಸಲಹೆಗಾಗಿ ತಜ್ಞರನ್ನು ಸಂಪರ್ಕಿಸುವುದು ಅಗತ್ಯವಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page