
ಭಾರತದ ಷೇರು ಮಾರುಕಟ್ಟೆ ಮುಂದುವರೆದ ಕುಸಿತದಿಂದ (Stock market crash) ಬಳಲುತ್ತಿದೆ. ವಿದೇಶಿ ಹೂಡಿಕೆದಾರರ ಬಂಡವಾಳ ಹೊರ ಹೋಗುತ್ತಿರುವುದರಿಂದ ಮಾರುಕಟ್ಟೆ ಮುಂದುವರೆದ ಇಳಿಮುಖಕ್ಕೆ ಕಾರಣವಾಗಿದೆ. Bombay Stock Exchange ನಲ್ಲಿ 4,000 ಕ್ಕೂ ಹೆಚ್ಚು ಷೇರುಗಳಲ್ಲಿ 1,000ಕ್ಕೂ ಹೆಚ್ಚು ಷೇರುಗಳ ಮೌಲ್ಯ ಗಣನೀಯವಾಗಿ ಕುಸಿದಿದೆ.
ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ, BSCನಲ್ಲಿ ಕನಿಷ್ಠ 500 ಕೋಟಿ ರೂ ಬಂಡವಾಳ ಇರುವ 1,058 ಕಂಪನಿಗಳ ಷೇರು ಮೌಲ್ಯ ಶೇ. 30ರಷ್ಟು ಇಳಿಮುಖವಾಗಿದೆ. NSCಯಲ್ಲಿ ನಿಫ್ಟಿ 500 ಇಂಡೆಕ್ ನ ಶೇ. 81ರಷ್ಟು ಷೇರುಗಳು 200 ದಿನಗಳ ಸರಾಸರಿ ದರಕ್ಕಿಂತ ಕಡಿಮೆಯಾಗಿವೆ, ಇದು “ಬೇರಿಶ್ ಟ್ರೆಂಡ್” ಅನ್ನು ಸೂಚಿಸುತ್ತದೆ.
ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸುದೀರ್ಘ ಕುಸಿತ ಮುಂದುವರೆದಿದೆ. ಅಮೆರಿಕದ ಹೂಡಿಕೆದಾರ ಜಿಮ್ ರೋಜರ್ಸ್ ಇದಕ್ಕೆ ಹೆಚ್ಚಿನ ಕುಸಿತವನ್ನು ನಿರೀಕ್ಷಿಸುತ್ತಿದ್ದಾರೆ.