ವಿಮಾನ ಪ್ರಯಾಣವನ್ನು (air travel) ಸುಗಮಗೊಳಿಸುವ ಮತ್ತು ಭದ್ರತಾ ಕ್ರಮಗಳನ್ನು ಬಿಗಿಗೊಳಿಸುವ ನಿಟ್ಟಿನಲ್ಲಿ, ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (BCAS) ಹೊಸ ನಿಯಮವನ್ನು ಜಾರಿಗೆ ತಂದಿದೆ. ಇದರಿಂದ, ಮುಂದಿನ ತಿಂಗಳಿಂದ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳಲ್ಲಿ ಪ್ರಯಾಣಿಕರು ಕೇವಲ 1 ಬ್ಯಾಗ್ ಮಾತ್ರ ಕ್ಯಾಂಬಿನ್ ಒಳಗೆ ತೆಗೆದುಕೊಂಡು ಹೋಗಲು ಅನುಮತಿಸಲಾಗುವುದು.
ಹೊಸ ಬ್ಯಾಗೇಜ್ ನಿಯಮಗಳ ಪ್ರಮುಖ ವಿವರಗಳು
- 7 ಕೆಜಿಗಿಂತ ಹೆಚ್ಚಾಗಬಾರದು: ಪ್ರತಿ ಪ್ರಯಾಣಿಕರು 7 ಕೆಜಿ ಮೀರದ 1 ಕೈಚೀಲವನ್ನು ಮಾತ್ರ ತೆಗೆದುಕೊಂಡು ಹೋಗಬಹುದು.
- ಕ್ಯಾಬಿನ್ ಬ್ಯಾಗ್ ಗಾತ್ರದ ಮಿತಿಗಳು: 55 ಸೆಂ.ಮೀ ಎತ್ತರ, 40 ಸೆಂ.ಮೀ ಉದ್ದ ಮತ್ತು 20 ಸೆಂ.ಮೀ ಅಗಲದ ಗಾತ್ರವನ್ನು ಮೀರುವ ಬ್ಯಾಗ್ ಅನುಮತಿಸಲಾಗುವುದಿಲ್ಲ.
- ಹೆಚ್ಚುವರಿ ಬ್ಯಾಗೇಜ್ ಶುಲ್ಕ: ಗಾತ್ರ ಅಥವಾ ತೂಕ ಮೀರುತ್ತಿದ್ದಲ್ಲಿ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.
- ಮೂಡಲಾದ ಟಿಕೆಟ್ ಗಳಿಗೆ ವಿನಾಯಿತಿ: ಮೇ 2, 2024 ರ ಮುಂಚೆ ಟಿಕೆಟ್ ಖರೀದಿಸಿದವರಿಗೆ ವಿನಾಯಿತಿಗಳು ಇರುತ್ತದೆ.
ವಿಮಾನಯಾನ ಸಂಸ್ಥೆಗಳು, ಉದಾಹರಣೆಗೆ ಇಂಡಿಗೋ ಮತ್ತು ಏರ್ ಇಂಡಿಯಾ, ತಮ್ಮ ಬ್ಯಾಗೇಜ್ ನೀತಿಗಳನ್ನು ನವೀಕರಿಸಿವೆ. ಪ್ರಯಾಣಿಕರು ಮುಂಚಿತವಾಗಿ ಲಗೇಜ್ ನಿಯಮಗಳನ್ನು ಪರಿಶೀಲಿಸುವ ಮೂಲಕ ತೊಂದರೆಗಳನ್ನು ತಪ್ಪಿಸಬಹುದು.