ಭಾರತವು ಗುರುವಾರ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಪೃಥ್ವಿ-2 ಮತ್ತು ಅಗ್ನಿ-1 ಎಂಬ ಎರಡು ಅಲ್ಪ ಮತ್ತು ಮಧ್ಯಮ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಈ ಉಡಾವಣೆಯನ್ನು ರಕ್ಷಣಾ ಸಚಿವಾಲಯ ದೃಢಪಡಿಸಿದೆ.
- ಅಗ್ನಿ-1: ಅಬ್ದುಲ್ ಕಲಾಂ ದ್ವೀಪದಿಂದ ಉಡಾವಣೆ
- ಪೃಥ್ವಿ-2: ಒಡಿಶಾದ ಚಂಡಿಪುರದಲ್ಲಿರುವ ಪರೀಕ್ಷಾ ಶ್ರೇಣಿಯಿಂದ ಪ್ರಯೋಗ
ಪೃಥ್ವಿ-2 ಕ್ಷಿಪಣಿಯ ವೈಶಿಷ್ಟ್ಯಗಳು
- ಅಲ್ಪ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ
- 250-350 ಕಿಮೀ ವ್ಯಾಪ್ತಿ
- ಸಾಂಪ್ರದಾಯಿಕ ಮತ್ತು ಪರಮಾಣು ಶಸ್ತ್ರಾಸ್ತ್ರ ಸಾಗಿಸಲು ಸಮರ್ಥ
- ದ್ರವ ಇಂಧನ ಹಾಗೂ ಅಡ್ವಾನ್ಸ್ಡ್ ನ್ಯಾವಿಗೇಶನ್ ಹೊಂದಿದೆ
ಅಗ್ನಿ-1 ಕ್ಷಿಪಣಿಯ ವೈಶಿಷ್ಟ್ಯಗಳು
- ಮಧ್ಯಮ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ
- 700-900 ಕಿಮೀ ವ್ಯಾಪ್ತಿ
- 1000 ಕೆಜಿ ವರೆಗೆ ಪೇಲೋಡ್ ಸಾಗಿಸಬಹುದು
- ರಸ್ತೆಯ ಮೂಲಕ ಇತರ ಪ್ರದೇಶಗಳಿಗೆ ಸಾಗಿಸಬಹುದು
- ಪರಮಾಣು ಶಸ್ತ್ರ ಸಾಮರ್ಥ್ಯ ಹೊಂದಿದೆ
ಪೃಥ್ವಿ ಮತ್ತು ಅಗ್ನಿ ಪರೀಕ್ಷೆಗೂ ಮುನ್ನ, ಭಾರತ ಬುಧವಾರ ‘ಆಕಾಶ್ ಪ್ರೈಮ್’ ಮಿಸೈಲ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಿತ್ತು. ಇದು ವಾಯು ದಾಳೆಗಳಿಂದ ರಕ್ಷಿಸಲು ವಿನ್ಯಾಸಗೊಳ್ಳಲಾಗಿದೆ.
- 4500 ಮೀ ಎತ್ತರದ ಗುರಿಗಳನ್ನು ಹೊಡೆದುರುಳಿಸಲು ಕಸ್ಟಮೈಸ್ ಮಾಡಲಾಗಿದೆ.
- ಆರ್‌ಎಫ್ ಸೀಕರ್ ಸೇರಿದಂತೆ ಹೊಸ ತಂತ್ರಜ್ಞಾನಗಳನ್ನು ಹೊಂದಿದೆ.
ಈ ಯಶಸ್ವಿ ಕ್ಷಿಪಣಿ ಪರೀಕ್ಷೆಗಳು ಭಾರತದ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಿವೆ. ಇದು ಎದುರಾಳಿ ರಾಷ್ಟ್ರಗಳಿಗೆ ಎಚ್ಚರಿಕೆಯ ಸಂಕೇತವೂ ಹೌದು.