ವಿವಿಧ ರೀತಿಯ ಆಹಾರ ಉತ್ಪನ್ನಗಳಲ್ಲಿ ಕೃತಕ ಸಿಹಿಕಾರಕಗಳನ್ನು ಬಳಸುತ್ತಿದ್ದು ಅವುಗಳ ಮೇಲೆ ನಾವು ಹೆಚ್ಚು ಅವಲಂಬಿತರಾಗಿದ್ದೇವೆ, ಆದರೆ ಅವುಗಳು ನಮ್ಮ ಆರೋಗ್ಯದ ಮೇಲೆ ಯಾವ ರೀತಿ ಗಂಭೀರ ಪರಿಣಾಮ ಬೀರಬಹುದು ಎಂದು ನಾವು ಅರ್ಥಮಾಡಿಕೊಳ್ಳುವುದಿಲ್ಲ. ಸಂಸ್ಕರಿಸಿದ ಸಕ್ಕರೆಯು (refined sugar) ಹೊಸ ತಂಬಾಕಾಗಿ (tobacco) ಬದಲಾಗುತ್ತಿದೆ ಮತ್ತು ಜನರು ಅದಕ್ಕೆ ವ್ಯಸನಿಗಳಾಗುತ್ತಿದ್ದಾರೆ ಎಂಬ ಆಘಾತಕಾರಿ ವಿಷಯವನ್ನು ಸಂಶೋಧಕರು ಬಹಿರಂಗ ಪಡಿಸಿದ್ದಾರೆ.
ದೀರ್ಘಕಾಲದ ಕಾಯಿಲೆಗಳು ಅಪಾಯವನ್ನು ಹೆಚ್ಚಿಸುತ್ತದೆ
MGM ಹೆಲ್ತ್ ಕೇರ್ ನ ಹಿರಿಯ ಸಲಹೆಗಾರ ಡಾ. ಸ್ವಾಮಿ ಕಣ್ಣು ಅವರು ಈ ಬಗ್ಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು, “ನಾವು ಪ್ರತಿದಿನ ಸೇವಿಸುವ ಬ್ರೆಡ್, ಬಿಸ್ಕತ್ತು, ಚಹಾ, ಕಾಫಿ, ತಾಜಾ ರಸಗಳು, ಐಸ್ ಕ್ರೀಮ್ಗಳು, ಸಿಹಿತಿಂಡಿಗಳು, ಪೇಸ್ಟ್ರಿಗಳು ಮುಂತಾದ ಆಹಾರಗಳಲ್ಲಿ ಸಂಸ್ಕರಿಸಿದ ಸಕ್ಕರೆಯನ್ನು ಬಳಸಲಾಗುತ್ತದೆ” ಎಂದು ಹೇಳಿದ್ದಾರೆ. “ಸಂಸ್ಕರಿಸಿದ ಸಕ್ಕರೆಗಳನ್ನು ಕೇಕ್, ಐಸ್ ಕ್ರೀಮ್ ಮತ್ತು ಕ್ಯಾಂಡಿ ಸೇರಿದಂತೆ ನಮ್ಮ ನೆಚ್ಚಿನ ಅನೇಕ ಆಹಾರಗಳಲ್ಲಿ ಪತ್ತೆಹಚ್ಚಬಹುದು. ಈ ಸಿಹಿತಿಂಡಿಗಳು ಬೊಜ್ಜು, ಅಧಿಕ ರಕ್ತದೊತ್ತಡ, ಮಧುಮೇಹ(diabetes) ಮತ್ತು ಹೃದ್ರೋಗದಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸಬಹುದು. ಇದು ನಾವು ತಿನ್ನುವ ಆಹಾರದಲ್ಲಿಯೇ ಅಡಗಿದ್ದು ನಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ.
ಈ ಹೊಸ ಪ್ರಯೋಗಕ್ಕಾಗಿ ಜೇನುತುಪ್ಪ(Honey), ಮೇಪಲ್ ಸಿರಪ್ ಅಥವಾ ಅಗಸೆ ಮಕರಂದದಂತಹ ನೈಸರ್ಗಿಕ ಸಿಹಿಕಾರಕಗಳನ್ನು ಬಳಸಿ. ಸಿಹಿಯನ್ನು ಸೇರಿಸುವುದರ ಜೊತೆಗೆ, ಈ ಉತ್ಪನ್ನಗಳು ನಿಮ್ಮ ನಾಲಿಗೆಗೆ ವಿಶಿಷ್ಟ ರುಚಿಗಳನ್ನು ನೀಡುತ್ತದೆ. ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ.
- *ಸಂಸ್ಕರಿಸಿದ ತಿಂಡಿಗಳಿಗಿಂತ ಮನೆಯಲ್ಲಿಯೇ ಸರಳವಾಗಿ ಊಟ ಮಾಡಿ ಸೇವನೆ ಮಾಡಿ. ಜೊತೆಗೆ ಒಳ್ಳೆಯ ಧಾನ್ಯ, ಹಣ್ಣುಗಳು ಮತ್ತು ತರಕಾರಿಗಳು ಅಗತ್ಯ ಪೋಷಕಾಂಶಗಳನ್ನು ಹೊಂದಿರುವುದು ಮಾತ್ರವಲ್ಲದೆ ಯಾವುದೇ ಹೆಚ್ಚಿನ ಸಕ್ಕರೆ ಇಲ್ಲದಿರುವುದರಿಂದ ಇದನ್ನು ಸೇವನೆ ಮಾಡಿ ಆರೋಗ್ಯ ಕಾಪಾಡಿಕೊಳ್ಳಬಹುದು.
- *ಜೊತೆಗೆ ಆಹಾರದಲ್ಲಿ ಸ್ವಲ್ಪ ಬುದ್ಧಿವಂತಿಕೆಯನ್ನು ಬೆಳೆಸಿಕೊಳ್ಳಬೇಕು. ಅಂದರೆ ನೀವು ಏನನ್ನು ತಿನ್ನುತ್ತೀರಿ ಜೊತೆಗೆ ಎಷ್ಟು ತಿನ್ನುತ್ತೀರಿ ಎಂಬುದರ ಬಗ್ಗೆ ಜಾಗರೂಕರಾಗಿರಿ. ಈ ಶಿಸ್ತನ್ನು ಸರಿಯಾಗಿ ಅಭ್ಯಾಸ ಮಾಡಿಕೊಂಡರೆ ನಂತರ ಸಿಹಿ ತಿನಿಸುಗಳನ್ನು ಅತಿಯಾಗಿ ಸೇವಿಸುವ ಸಾಧ್ಯತೆ ಕಡಿಮೆ.
- *ಮನೆಯಲ್ಲಿ ತಯಾರಿಸುವ ಸಿಹಿ ತಿನಿಸುಗಳಲ್ಲಿ ಸಕ್ಕರೆಯನ್ನು ಕಡಿಮೆ ಹಾಕಿ, ಈ ರೀತಿಯಾಗಿ ನೀವು ನಿಮ್ಮ ಊಟದಲ್ಲಿ ಬಳಸುವ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಬಹುದು. ಜೊತೆಗೆ ಸಂಸ್ಕರಿಸಿದ ಆಹಾರಗಳನ್ನು ಸೇವನೆ ಮಾಡುವ ಮೊದಲು ಸಕ್ಕರೆ ಪ್ರಮಾಣ ಕಡಿಮೆ ಇರುವ ಆಹಾರಗಳನ್ನು ಸೇವನೆ ಮಾಡಿ. ಈ ರೀತಿ ಮಾಡುವುದರಿಂದ ನಿಮ್ಮ ಜೀವನಶೈಲಿಯನ್ನು ಸುಧಾರಿಸಿಕೊಳ್ಳಬಹುದು ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.