ಈ ಭಾನುವಾರ ಕ್ರಿಕೆಟ್ ಪ್ರಿಯರಿಗೆ ಎರಡು ರೋಚಕ ಪಂದ್ಯಗಳನ್ನು ನೋಡುವ ಅವಕಾಶ ಸಿಗಲಿದೆ. ದೀಪಾವಳಿ ಹಬ್ಬದ ನಡುವೆ, ಪುರುಷ ಮತ್ತು ಮಹಿಳಾ ತಂಡಗಳೆರಡೂ ಕ್ರಿಕೆಟ್ ಪಂದ್ಯ ಆಡಲಿವೆ.
ಭಾರತ vs ಆಸ್ಟ್ರೇಲಿಯಾ (ಪುರುಷರು): ಅಕ್ಟೋಬರ್ 19 ರಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ಪ್ರಾರಂಭವಾಗಲಿದೆ. ಮೊದಲ ಪಂದ್ಯ ಪರ್ತ್‌ನ ಆಪ್ಟಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬೆಳಗ್ಗೆ 9:00 ಗಂಟೆಗೆ ನಡೆಯಲಿದೆ.
- ಭಾರತದ ನಾಯಕ: ಶುಭ್ಮನ್ ಗಿಲ್
- ಆಸ್ಟ್ರೇಲಿಯಾದ ನಾಯಕ: ಮಿಚೆಲ್ ಮಾರ್ಷ್
- ಮೈದಾನಕ್ಕೆ ಮರಳುವವರು: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ
ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿ ಶೆಡ್ಯೂಲ್
- ಅಕ್ಟೋಬರ್ 19 – ಮೊದಲ ಪಂದ್ಯ, ಪರ್ತ್
- ಅಕ್ಟೋಬರ್ 23 – ಎರಡನೇ ಪಂದ್ಯ, ಅಡಿಲೇಡ್
- ಅಕ್ಟೋಬರ್ 25 – ಮೂರನೇ ಪಂದ್ಯ, ಸಿಡ್ನಿ
ಭಾರತದ ತಂಡ: ಶುಭ್ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್ (ಉಪನಾಯಕ), ಅಕ್ಷರ್ ಪಟೇಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಶದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಧ್ರುವ್ ಜುರೇಲ್.
ಭಾರತ vs ಇಂಗ್ಲೆಂಡ್ (ಮಹಿಳಾ ತಂಡ): ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯ ಮಧ್ಯಪ್ರದೇಶದ ಇಂದೋರ್ನ ಹೋಳ್ಕರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಧ್ಯಾಹ್ನ 3:00 ಗಂಟೆಗೆ ನಡೆಯಲಿದೆ.
- ಭಾರತದ ನಾಯಕಿ: ಹರ್ಮನ್ಪ್ರೀತ್ ಕೌರ್
- ಇಂಗ್ಲೆಂಡ್ ನಾಯಕಿ: ನ್ಯಾಟ್ ಸಿವರ್-ಬ್ರಂಟ್
ಭಾರತ ಗೆದ್ದರೆ ಸೆಮಿಫೈನಲ್ ದಾರಿ ಸುಲಭವಾಗಲಿದೆ. ಸೋಲು ಕಂಡರೆ ಮುಂದಿನ ಎರಡೂ ಪಂದ್ಯಗಳಲ್ಲಿ ಗೆಲ್ಲಬೇಕಾಗುತ್ತದೆ ಮತ್ತು ಫಲಿತಾಂಶವನ್ನು ಇತರ ತಂಡಗಳ ಮೇಲೆ ಅವಲಂಭಿಸಬೇಕಾಗುತ್ತದೆ.
ಭಾರತದ ಮಹಿಳಾ ತಂಡ: ಹರ್ಮನ್ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉ.ನಾಯಕಿ), ಪ್ರತೀಕಾ ರಾವಲ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ಜೆಮಿಮಾ ರಾಡ್ರಿಗ್ಸ್, ರೇಣುಕಾ ಸಿಂಗ್ ಠಾಕೂರ್, ಅರುಂಧತಿ ರೆಡ್ಡಿ, ರಿಚಾ ಘೋಷ್ (ವಿಕೆಟ್ ಕೀಪರ್), ಕ್ರಾಂತಿ ಗೌಡ್, ಅಮಂಜೋತ್ ಕೌರ್, ರಾಧಾ ಯಾದವ್, ಶ್ರೀ ಚರಣಿ, ಯಸ್ತಿಕಾ ಬಾಟಿಯ, ಸ್ನೇಹ ರಾಣಾ.







