Home India New Delhi Supreme Court ನ CJI ಆಗಿ ನ್ಯಾ. UU Lalit ಹೆಸರು ಶಿಫಾರಸು

Supreme Court ನ CJI ಆಗಿ ನ್ಯಾ. UU Lalit ಹೆಸರು ಶಿಫಾರಸು

317
Supreme Court CJI UU Lalit

New Delhi : Supreme Court ಮುಖ್ಯ ನ್ಯಾಯಮೂರ್ತಿ (CJI – Chief Justice of India) ಹುದ್ದೆಗೆ ನ್ಯಾ. ಯು ಯು ಲಲಿತ್‌ (UU Lalit) ಅವರ ಹೆಸರನ್ನು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ (N V Ramana) ಶಿಫಾರಸು ಮಾಡಿದ್ದಾರೆ.

CJI ರಮಣ ಅವರಿಗೆ ಪತ್ರದ ಮೂಲಕ ಕಾನೂನು ಮಂತ್ರಿ ಕಿರಣ್ ರಿಜಿಜು (Kiren Rijiju) ತಮ್ಮ ಉತ್ತರಾಧಿಕಾರಿ ಹೆಸರನ್ನು ಶಿಫಾರಸು ಮಾಡುವಂತೆ ಸೂಚಿಸಿದ್ದರು. ಕೇಂದ್ರ ಸರ್ಕಾರದ ಪತ್ರಕ್ಕೆ ಪ್ರತಿಕ್ರಿಯಿಸಿರುವ ನ್ಯಾ. ರಮಣ ಅವರು ನ್ಯಾಯಮೂರ್ತಿ ಲಲಿತ್ ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ.

ಸಿಜೆಐ ರಮಣ ಅವರು ಆಗಸ್ಟ್ 26 ರಂದು ನಿವೃತ್ತರಾಗಲಿದ್ದು, ಬಳಿಕ ಅಧಿಕಾರ ವಹಿಸಿಕೊಳ್ಳಲಿರುವ ನ್ಯಾ. ಲಲಿತ್‌ ಅವರು ಮುಂಬರುವ ನವೆಂಬರ್ 8 ರಂದು ನಿವೃತ್ತರಾಗಲಿದ್ದಾರೆ. ಬಹಳ ಕಡಿಮೆ ಅವಧಿಗೆ (74 Days) ಅವರು ಸುಪ್ರೀಂ ಕೋರ್ಟ್‌ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

ನ್ಯಾ. ಯು ಯು ಲಲಿತ್‌ ರ ನಂತರ ನ್ಯಾ. ಡಿ ವೈ ಚಂದ್ರಚೂಡ್‌ (Dhananjaya Y. Chandrachud) ಸಿಜೆಐ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದು ಎರಡು ವರ್ಷಗಳ ಕಾಲ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಲಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page