ನವದೆಹಲಿ: ವಿದೇಶಿ ಎಂದು ಘೋಷಿತಗೊಂಡವರನ್ನು ಗಡಿಪಾರು ಮಾಡದ ಅಸ್ಸಾಂ ಸರ್ಕಾರವನ್ನು ಸುಪ್ರೀಂ ಕೋರ್ಟ್ (Supreme Court) ಕಟುವಾಗಿ ಟೀಕಿಸಿದೆ. ಪ್ರಸ್ತುತ ಬಂಧನ ಕೇಂದ್ರಗಳಲ್ಲಿ ಇರುವ 63 ಜನರನ್ನು ಗಡಿಪಾರು ಮಾಡಲು ಕೆಲ “ಮುಹೂರ್ತ”ಗಳಿಗಾಗಿ ಕಾಯುತ್ತಿದ್ದೀರಾ ಎಂದು ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಅಸ್ಸಾಂ ಸರ್ಕಾರವನ್ನು (Assam government) ಸುಪ್ರೀಂ ಕೋರ್ಟ್ ಕೇಳಿದೆ.
ನ್ಯಾಯಮೂರ್ತಿ ಅಭಯ್ ಎಸ್ ಓಕಾ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರ ಪೀಠವು, ಅಸ್ಸಾಂನಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್ಸಿ) ಪ್ರಕ್ರಿಯೆ ನವೀಕರಿಸುವ ಸಮಯದಲ್ಲಿ ಅವರನ್ನು ಗಡಿಪಾರು ಮಾಡಲು ರಾಜ್ಯ ಸರ್ಕಾರವನ್ನು ಸೂಚಿಸಿದೆ.