ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ನಿರಾಸಾಜನಕ ಪ್ರದರ್ಶನ ನೀಡಿದ ಸೂರ್ಯಕುಮಾರ್ ಯಾದವ್ (Suryakumar Yadav) ಇದೀಗ ರಣಜಿ ಪಂದ್ಯದಲ್ಲೂ ವಿಫಲರಾಗಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ಪರ ಆಡಿದ ಅವರು ಕೇವಲ 9 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಹರ್ಯಾಣ ವಿರುದ್ಧ ಮುಂಬೈ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, ಆರಂಭದಲ್ಲಿ ತಂಡ ಆಘಾತ ಅನುಭವಿಸಿತು. ಆಯುಷ್ ಶೂನ್ಯಕ್ಕೆ ಔಟಾದರು, ಆಕಾಶ್ ಆನಂದ್ 10 ರನ್ ಮಾತ್ರ ಗಳಿಸಿದರು. ನಾಯಕ ಅಜಿಂಕ್ಯ ರಹಾನೆ 31 ರನ್ ಬಾರಿಸಿ ಔಟಾದರು.
ಸೂರ್ಯಕುಮಾರ್ ಯಾದವ್ ಟಿ20 ಸರಣಿಯ 5 ಇನಿಂಗ್ಸ್‌ನಲ್ಲಿ ಕೇವಲ 28 ರನ್ ಗಳಿಸಿದ್ದರು. ರಣಜಿಯ ಮೊದಲ ಇನಿಂಗ್ಸ್‌ನಲ್ಲೂ ಕೇವಲ 9 ರನ್ ಗಳಿಸಿ ನಿರಾಸೆ ಮೂಡಿಸಿದರು.
ಮೊದಲು ಬ್ಯಾಟ್ ಮಾಡಿದ ಮುಂಬೈ 113 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿತ್ತು. ಶಾರ್ದೂಲ್ ಠಾಕೂರ್ ಹಾಗೂ ತನುಷ್ ಕೋಟ್ಯಾನ್ ಕ್ರೀಸಿನಲ್ಲಿ ಇದ್ದಾರೆ. 38 ಓವರ್ ಮುಕ್ತಾಯದ ವೇಳೆಗೆ ಮುಂಬೈ 137 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿದೆ.
ಹರ್ಯಾಣ: ಲಕ್ಷ್ಯ ದಲಾಲ್, ಯಶ್ ವರ್ಧನ್ ದಲಾಲ್, ಅಂಕಿತ್ ಕುಮಾರ್ (ನಾಯಕ), ಹಿಮಾಂಶು ರಾಣಾ, ನಿಶಾಂತ್ ಸಿಂಧು, ರೋಹಿತ್ ಶರ್ಮಾ (ವಿಕೆಟ್ ಕೀಪರ್), ಜಯಂತ್ ಯಾದವ್, ಸುಮಿತ್ ಕುಮಾರ್, ಅನ್ಶುಲ್ ಕಾಂಬೋಜ್, ಅನುಜ್ ಥಕ್ರಾಲ್, ಅಜಿತ್ ಚಹಲ್.
ಮುಂಬೈ: ಆಯುಷ್ ಮ್ಹಾತ್ರೆ, ಆಕಾಶ್ ಆನಂದ್ (ವಿಕೆಟ್ ಕೀಪರ್), ಸಿದ್ಧೇಶ್ ಲಾಡ್, ಅಜಿಂಕ್ಯ ರಹಾನೆ (ನಾಯಕ), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಶಮ್ಸ್ ಮುಲಾನಿ, ಶಾರ್ದೂಲ್ ಠಾಕೂರ್, ತನುಷ್ ಕೋಟ್ಯಾನ್, ಮೋಹಿತ್ ಅವಸ್ತಿ, ರಾಯ್ಸ್ಟನ್ ಡಯಾಸ್.