SVAMITVA ಯೋಜನೆಯಡಿ (SVAMITVA Scheme) 2.19 ಕೋಟಿ ಆಸ್ತಿ ಕಾರ್ಡ್‌ಗಳನ್ನು ಹಳ್ಳಿ ಜನರಿಗೆ ವಿತರಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಈ ಯೋಜನೆ 2026 ಮಾರ್ಚ್ ನಿಂದ ಪೂರ್ಣಗೊಳ್ಳಲಿದೆ. ಇದರ ಮೂಲಕ ಗ್ರಾಮೀಣ ಜನರಿಗೆ ಅವರ ಆಸ್ತಿಯ ಹಕ್ಕುಗಳನ್ನು ನೀಡಲಾಗುತ್ತದೆ, ಹಾಗು ಬ್ಯಾಂಕ್ ಗಳಿಂದ ಸಾಲ ಪಡೆಯಲು ಸಹಾಯ ಮಾಡಲಾಗುತ್ತದೆ.
2020 ರಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಪ್ರಗತಿ ತಲುಪಿಸಲು PM ನರೇಂದ್ರ ಮೋದಿ ಡ್ರೋನ್ ಗಳ ಮೂಲಕ ಭೂಮಿಯನ್ನು ಸಮೀಕ್ಷೆ ಮಾಡುವ ಯೋಜನೆ ಪ್ರಾರಂಭಿಸಿದರು. ಇದರಿಂದ, ಜಿಐಎಸ್ ತಂತ್ರಜ್ಞಾನ ಬಳಸಿ ಗ್ರಾಮೀಣ ಭೂಮಿಗಳನ್ನು ಗುರುತಿಸಲಾಗುತ್ತದೆ.
ಡಿಸೆಂಬರ್ 27 ರಂದು, 10 ರಾಜ್ಯಗಳ 50,000 ಹಳ್ಳಿಗಳಲ್ಲಿ 58 ಲಕ್ಷ ಆಸ್ತಿ ಕಾರ್ಡ್‌ಗಳನ್ನು ವಿತರಿಸಲಾಗುತ್ತದೆ. ಇದರ ಮೂಲಕ, ಗ್ರಾಮೀಣ ಪ್ರದೇಶದ ಜನರಿಗೆ ಮಾಲೀಕತ್ವದ ಹಕ್ಕು ಖಚಿತಪಡಿಸಿಕೋಂಡು, ಬ್ಯಾಂಕ್ ಸಾಲ ಪಡೆಯಲು ಸಹಾಯವಾಗುತ್ತದೆ.
ಈ ಯೋಜನೆ ಮೂಲಕ, ಗ್ರಾಮೀಣ ಪ್ರದೇಶಗಳಲ್ಲಿ ಭೂ ಮಾಲೀಕತ್ವದ ಹಕ್ಕುಗಳನ್ನು ಖಚಿತಪಡಿಸಿ, ಭೂ ವಿವಾದಗಳನ್ನು ಕಡಿಮೆ ಮಾಡಬಹುದು. ಈ ಯೋಜನೆಯ ಮೂಲಕ, 1.49 ಲಕ್ಷ ಗ್ರಾಮಗಳಲ್ಲಿ 2.19 ಕೋಟಿಗೂ ಹೆಚ್ಚು ಆಸ್ತಿ ಕಾರ್ಡ್‌ಗಳನ್ನು ಸೃಷ್ಟಿಸಲಾಗಿದೆ, ಮತ್ತು 2026 ರ ವೇಳೆಗೆ ಎಲ್ಲ ಫಲಾನುಭವಿಗಳಿಗೆ ಈ ಕಾರ್ಡ್‌ಗಳು ಲಭ್ಯವಾಗಲಿದೆ.