back to top
21.5 C
Bengaluru
Wednesday, September 17, 2025
HomeSportsCricketT10 Cricket League: Ajman Bolts ವಿರುದ್ಧ Abu Dhabi ತಂಡದ ಗೆಲುವು

T10 Cricket League: Ajman Bolts ವಿರುದ್ಧ Abu Dhabi ತಂಡದ ಗೆಲುವು

- Advertisement -
- Advertisement -

ಅಬುಧಾಬಿ T10 ಕ್ರಿಕೆಟ್​ ಲೀಗ್​ನಲ್ಲಿ (Abu Dhabi T10 Cricket League) ಕೋಲ್ಕತ್ತಾ ನೈಟ್‌ ರೈಡರ್ಸ್‌ (Kolkata Knight Riders-KKR) ತಂಡದ ಮಾಜಿ ಬ್ಯಾಟರ್​ ವಿಧ್ವಂಸಕ ಪ್ರದರ್ಶನ ತೋರಿ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ.

ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ್ದ ಅಜ್​ಮನ್ ಬೋಲ್ಟ್ಸ್​ (Ajman Bolts) ತಂಡ, ನಿಗದಿತ 10 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 79 ರನ್​ ಕಲೆ ಹಾಕಿತ್ತು.

ಅಜ್​ಮನ್​ ಬೋಲ್ಟ್ಸ್ (Ajman Bolts) ಪರ​ ಡ್ಯಾನಿಯಲ್​ (22), ರವಿ ಬೊಪಾರ (23), ಶೆಹಾನ್​ ಜಯಸೂರ್ಯ (10) ಹೊರತುಪಡಿಸಿ ಉಳಿದ ಬ್ಯಾಟರ್​ಗಳು ಎರಡಂಕಿ ದಾಟಲು ಸಾಧ್ಯವಾಗಲಿಲ್ಲ. ಡ್ಯಾನಿಯಲ್​ 10 ಎಸೆತಗಳನ್ನು ಎದುರಿಸಿ 3 ಬೌಂಡರಿ ಮತ್ತು 1 ಸಿಕ್ಸರ್​​ ಸಿಡಿಸಿದರೆ, ಬೊಪಾರ 3 ಬೌಂಡರಿ ಒಂದು ಸಿಕ್ಸರ್​ ಸಿಡಿಸಿ ತಂಡದ ಸ್ಕೋರ್​ಗೆ ಕೊಡುಗೆ ನೀಡಿದರು.

ಅಬುಧಾಬಿ ತಂಡದ ಬೌಲರ್‌ಗಳು ಮಾರ್ಕ್ ಅದೈರ್, ಜೀಶಾನ್ ನಾಸೀರ್, ಕದೀಮ್ ತಲಾ 2 ವಿಕೆಟ್ ಗಳಿಸಿದರೆ, ರೆಯಿಸ್ ಮತ್ತು ಕೇಲ್ ಮೇಯರ್ ತಲಾ 1 ವಿಕೆಟ್ ಪಡೆದರು.

ಅಜ್ಮನ್ ನೀಡಿದ ಗುರಿ ಬೆನ್ನತ್ತಿದ ಅಬುಧಾಬಿ, ಫಿಲ್ಸಾಲ್ಟ್ ಮತ್ತು ಜಾನಿ ಬೇರ್ಸ್ಟೋ ಬ್ಯಾಟಿಂಗ್ ನೆರವಿನಿಂದ 1 ವಿಕೆಟ್ ಕಳೆದುಕೊಂಡು 5.4 ಓವರ್ಗಳಲ್ಲಿ 81 ರನ್ ಸಿಡಿಸಿ ಗೆಲುವು ಸಾಧಿಸಿತು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page