
Dhaka: ಬಾಂಗ್ಲಾದೇಶದ (Bangladesh) ಮಾಜಿ ಕ್ರಿಕೆಟ್ ನಾಯಕ ತಮೀಮ್ ಇಕ್ಬಾಲ್ ಢಾಕಾ (Tamim Iqbal) ಪ್ರೀಮಿಯರ್ ಲೀಗ್ ಪಂದ್ಯವೇಳೆ ಹೃದಯಾಘಾತಕ್ಕೊಳಗಾಗಿದ್ದಾರೆ. ತಕ್ಷಣವೇ ಅವರನ್ನು ಢಾಕಾದ ಹೊರವಲಯದಲ್ಲಿರುವ ಫಜಿಲತುನ್ನೇಸ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೊಹಮ್ಮದನ್ ಸ್ಪೋರ್ಟಿಂಗ್ ಕ್ಲಬ್ ಮತ್ತು ಶಿನೆಪುಕುರ್ ಕ್ರಿಕೆಟ್ ಕ್ಲಬ್ ನಡುವಿನ ಪಂದ್ಯದಲ್ಲಿ ತಮೀಮ್ ಮೊಹಮ್ಮದನ್ ತಂಡವನ್ನು ಮುನ್ನಡೆಸುತ್ತಿದ್ದರು. ಟಾಸ್‌ನಲ್ಲಿ ಭಾಗವಹಿಸಿದ ಅವರು, ಮೊದಲ ಇನ್ನಿಂಗ್ಸ್ ವೇಳೆ ಫೀಲ್ಡಿಂಗ್ ಮಾಡುತ್ತಿದ್ದಾಗ ಎದೆನೋವಿನ ಸಮಸ್ಯೆ ಎದುರಿಸಿದರು.
ಮೈದಾನದಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಅವರನ್ನು ತುರ್ತಾಗಿ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಲು ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಯಿತಾದರೂ, ಹೆಚ್ಚುತ್ತಿರುವ ನೋವಿನ ಕಾರಣ ಅವರನ್ನು ಭೂಮಾರ್ಗದ ಮೂಲಕ ಫಜಿಲತುನ್ನೇಸ ಆಸ್ಪತ್ರೆಗೆ ಸೇರಿಸಲಾಯಿತು. ಈಗ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.