ತೆಲಂಗಾಣ ರಾಜ್ಯವು ಭಾರತದಲ್ಲಿ ಮೊದಲಬಾರಿಗೆ SC ಒಳಮೀಸಲಾತಿಯನ್ನು ಜಾರಿಗೆ (SC internal reservation) ತಂದಿದೆ. ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ತೆಲಂಗಾಣದಲ್ಲಿ SC ಪಟ್ಟಿ ಹೊಂದಿರುವ 59 ಉಪಜಾತಿಗಳನ್ನೆ ಗುರುತಿಸಿ, ಅವುಗಳನ್ನು ಹಿಂದುಳಿದಿರುವಿಕೆ ಮತ್ತು ಜನಸಂಖ್ಯೆ ಆಧಾರದಲ್ಲಿ ಮೂರು ಗುಂಪುಗಳಾಗಿ ವಿಂಗಡಿಸಿ ಮೀಸಲಾತಿ ನೀಡಲು ತೀರ್ಮಾನಿಸಲಾಗಿದೆ. ಇದು ಸಮಾಜದಲ್ಲಿ ನ್ಯಾಯ ತರುವ ಮಹತ್ವದ ಹೆಜ್ಜೆಯಾಗಿದೆ.
ಬಾಬಾಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನದಂದು (ಏಪ್ರಿಲ್ 14) ಈ ಗಜೆಟ್ ಅಧಿಸೂಚನೆ ಪ್ರಕಟವಾಗಿದ್ದು, ಇದು ಸಾಮಾಜಿಕ ನ್ಯಾಯಕ್ಕೆ ನೀಡಿದ ಅತ್ಯುತ್ತಮ ಗೌರವವಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಈ ಹೊಸ ಮೀಸಲಾತಿ ವ್ಯವಸ್ಥೆ ಅನ್ವಯ, ರಾಜ್ಯದ ಎಲ್ಲಾ ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಎಸ್ಸಿ ಒಳಮೀಸಲಾತಿ ಅನುಷ್ಠಾನವಾಗಲಿದೆ. ಮುಂದಿನ ಜನಗಣತಿಯಲ್ಲಿ ಎಸ್ಸಿ ಜನಸಂಖ್ಯೆ ಹೆಚ್ಚು ಕಂಡುಬಂದರೆ, ಮೀಸಲಾತಿ ಶೇಕಡಾವಾರಿಯೂ ತಿದ್ದಲಾಗುವುದು.
ಈ ಸಂಬಂಧ ರಾಜಧಾನಿಯಲ್ಲಿ ಫೆಬ್ರವರಿಯಲ್ಲಿ ಆಯೋಗದ ಶಿಫಾರಸುಗಳ ಆಧಾರದಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತು. ಕರ್ನಾಟಕದಲ್ಲಿಯೂ ಇದೇ ರೀತಿಯ ಒಳಮೀಸಲಾತಿಗೆ ಒತ್ತಡ ಹೆಚ್ಚಾಗುತ್ತಿದ್ದು, ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಸುದ್ದಿಗೋಷ್ಠಿಯಲ್ಲಿ ಸಚಿವ ಉತ್ತಮ್ ರೆಡ್ಡಿ ಹೇಳಿದರು: “ಇತರ ಪಕ್ಷಗಳು ಮಾತ್ರ ಮಾತು ಹೇಳಿದವು, ನಾವು ಕಾನೂನುಬದ್ಧವಾಗಿ, ಸಮಗ್ರವಾಗಿ ಈ ಕ್ರಮವನ್ನು ತೆಗೆದುಕೊಂಡಿದ್ದೇವೆ.”