
ಟೆಸ್ಲಾ ಸೈಬರ್‌ಟ್ರಕ್(Tesla Cybertruck:) ಕ್ರ್ಯಾಶ್ ಪರೀಕ್ಷೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ 5-ಸ್ಟಾರ್ ರೇಟಿಂಗ್ ಗಳಿಸಿದೆ. ಎಲಾನ್ ಮಸ್ಕ್ ನೇತೃತ್ವದ ಟೆಸ್ಲಾ ಕಂಪನಿಯು ಭವಿಷ್ಯದ ವಿನ್ಯಾಸದೊಂದಿಗೆ ಸುರಕ್ಷತೆಯಲ್ಲಿಯೂ ಮೊತ್ತ ಮೊದಲ ಸ್ಥಾನದಲ್ಲಿ ಉಳಿದಿದೆ.
ಕ್ಯಾಲಿಫೋರ್ನಿಯಾದಲ್ಲಿ ನಡೆದ ಪರೀಕ್ಷೆಯಲ್ಲಿ ಮುಂಭಾಗ ಮತ್ತು ಪಕ್ಕದ ಡಿಕ್ಕಿಗಳನ್ನು ಪರೀಕ್ಷಿಸಲಾಯಿತು. ಗಂಟೆಗೆ 56 ಕಿಮೀ ವೇಗದಲ್ಲಿ ನಡೆದ ಪರೀಕ್ಷೆಯಲ್ಲಿಯೂ ವಾಹನದ ಬಲಿಷ್ಠ ವಿನ್ಯಾಸವು ಗಮನಸೆಳೆದಿದೆ. ಡಿಕ್ಕಿಯ ಹೊರತಾಗಿಯೂ ವಿಂಡ್ ಷೀಲ್ಡ್ ಅಸ್ಥಿರವಾಗದೆ ಉಳಿದಿದೆ, airbags ಸರಿಯಾದ ಸಮಯಕ್ಕೆ ತೆರೆಯಲ್ಪಟ್ಟಿವೆ.
ಪಲ್ಟಿಯಾಗುವ ಸಾಧ್ಯತೆಯನ್ನು ಪರೀಕ್ಷಿಸುವ ಈ ಪರೀಕ್ಷೆಯಲ್ಲಿ 4-ಸ್ಟಾರ್ ರೇಟಿಂಗ್ ಲಭಿಸಿದೆ. ಕಡಿಮೆ ಗುರುತ್ವಾಕರ್ಷಣೆಯ ಕೇಂದ್ರವು ಇದನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ.
ಟೆಸ್ಲಾ ಸೈಬರ್‌ಟ್ರಕ್ ಬೆಲೆ ₹67-₹83 ಲಕ್ಷದ ನಡುವೆ ಇರಲಿದೆ. ಭಾರತ ಪ್ರವೇಶಕ್ಕಾಗಿ ಟೆಸ್ಲಾ ಪ್ರಯತ್ನಿಸುತ್ತಿದ್ದು, ಮುಂಬೈ ಮತ್ತು ದೆಹಲಿಯಲ್ಲಿ ಶೋ ರೂಂ ತೆರೆಯುವ ಯೋಜನೆಗಳಿವೆ.