New Delhi: ಪ್ರಸಿದ್ಧ ಎಲೆಕ್ಟ್ರಿಕ್ ಕಾರು ತಯಾರಿಕಾ ಸಂಸ್ಥೆ ಟೆಸ್ಲಾ (Tesla Car) ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಲು ಸಜ್ಜಾಗಿದೆ ಏಪ್ರಿಲ್‌ನಿಂದಲೇ 25,000 ಯುಎಸ್ ಡಾಲರ್ (ಸುಮಾರು 21-22 ಲಕ್ಷ ರೂಪಾಯಿ) ದರದಲ್ಲಿ Tesla ಕಾರುಗಳನ್ನು ಭಾರತದಲ್ಲಿ ಮಾರಾಟ ಮಾಡಬಹುದಾಗಿದೆ. ಈ ಕಾರುಗಳು ಜರ್ಮನಿಯ ಬರ್ಲಿನ್ ಕಾರ್ಖಾನೆಯಿಂದ ಆಮದು ಆಗಲಿವೆ.
ಆರಂಭದಲ್ಲಿ, ಮುಂಬೈ ಮತ್ತು ದೆಹಲಿಯನ್ನು ಗುರಿಯನ್ನಾಗಿ ಇಟ್ಟುಕೊಂಡು Tesla ತನ್ನ ಮಾರಾಟ ಮತ್ತು ಸೇವಾ ಕೇಂದ್ರಗಳನ್ನು ತೆರೆಯಲಿದೆ. ಈ ನಗರಗಳಲ್ಲಿ ಶೋರೂಮ್‌ಗಳಿಗೂ ಸ್ಥಳ ಗುರುತಿಸಲಾಗಿದೆ ಎಂದು ರಾಯಿಟರ್ಸ್ ವರದಿ ತಿಳಿಸಿದೆ.
ಅಮೆರಿಕ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಇಲಾನ್ ಮಸ್ಕ್ ಅವರನ್ನು ಭೇಟಿಯಾಗಿ ಟೆಸ್ಲಾ ಭಾರತ ಪ್ರವೇಶದ ಬಗ್ಗೆ ಚರ್ಚಿಸಿದ ಬಗ್ಗೆ ವರದಿಯಾಗಿದೆ. ಈ ಬಳಿಕ, ಭಾರತ ಸರ್ಕಾರ ಟೆಸ್ಲಾ ಕಾರುಗಳ ಆಮದು ತೆರಿಗೆಯನ್ನು ಶೇ. 70-100ರಿಂದ ಶೇ. 15ಕ್ಕೆ ಇಳಿಸಲು ಒಪ್ಪಿಗೆ ನೀಡಿದೆ.
ಇನ್ನೂ ಎರಡು ವರ್ಷಗಳಲ್ಲಿ ಭಾರತದಲ್ಲೇ ಕಾರು ಉತ್ಪಾದನೆಗಾಗಿ ಟೆಸ್ಲಾ ಒಂದು ಘಟಕ ಸ್ಥಾಪಿಸಬಹುದು ಎಂಬ ನಿರೀಕ್ಷೆಯಿದೆ. ಪ್ರಸ್ತುತ, ಭಾರತಕ್ಕೆ ಯಾವ ಮಾಡಲ್ ಕಾರುಗಳನ್ನು ತರಲಾಗುತ್ತದೆ ಎಂಬ ವಿವರ ಸ್ಪಷ್ಟವಾಗಿಲ್ಲ.
ಟೆಸ್ಲಾದ ಕಡಿಮೆ ಬೆಲೆಯ ಕಾರು ಮಾಡಲ್ 3 ಆಗಿದ್ದು, ಸದ್ಯದ ದರ 45,000 ಡಾಲರ್ (ಸುಮಾರು 35-40 ಲಕ್ಷ ರೂ). ಆದರೆ, 21 ಲಕ್ಷ ರೂಪಾಯಿ ಬೆಲೆಯಲ್ಲಿ ಯಾವ ಮಾಡಲ್ ಲಭ್ಯವಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.