back to top
26.3 C
Bengaluru
Friday, July 18, 2025
HomeNewsಬಾಹ್ಯಾಕಾಶದಲ್ಲಿ ಹೆಸರು ಕಾಳು ಮತ್ತು ಮೆಂತ್ಯೆ ಬೆಳೆ ಪರೀಕ್ಷೆ: Dharwad ದ ಸಂಶೋಧನೆಗೆ ಶ್ಲಾಘನೆ

ಬಾಹ್ಯಾಕಾಶದಲ್ಲಿ ಹೆಸರು ಕಾಳು ಮತ್ತು ಮೆಂತ್ಯೆ ಬೆಳೆ ಪರೀಕ್ಷೆ: Dharwad ದ ಸಂಶೋಧನೆಗೆ ಶ್ಲಾಘನೆ

- Advertisement -
- Advertisement -

New Delhi/Hubli: ‘ಆಕ್ಸಿಯಂ-4’ ಮಿಷನ್ ಯೋಜನೆಯ ಭಾಗವಾಗಿ ಹೆಸರು ಕಾಳು ಮತ್ತು ಮೆಂತ್ಯೆ ಬೀಜಗಳನ್ನು ಬಾಹ್ಯಾಕಾಶ ನಿಲ್ದಾಣಕ್ಕೆ (crops in space) ಕಳುಹಿಸಲಾಗಿದೆ. ಈ ಪ್ರಯೋಗವು ಬಾಹ್ಯಾಕಾಶ ಕೃಷಿ ಮತ್ತು ಅಲ್ಲಿ ಇರುವ ಗಗನಯಾತ್ರಿಗಳ ಆಹಾರ ಪೂರೈಕೆಗೆ ಸಹಕಾರಿಯಾಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Union Minister Prahlad Joshi) ಹೇಳಿದರು.

ಈ ಅಧ್ಯಯನದಲ್ಲಿ ಧಾರವಾಡದ ಸಹಭಾಗಿತ್ವ ಮಹತ್ವದ್ದು. ಐಐಟಿ ಧಾರವಾಡ ಮತ್ತು ಕೃಷಿ ವಿಶ್ವವಿದ್ಯಾಲಯ (ಯುಎಎಸ್) ಇದರ ಮುಖ್ಯ ಭಾಗವಾಗಿದೆ. ಈ ಪ್ರಯೋಗ ಭಾರತದಿಂದ 41 ವರ್ಷಗಳ ನಂತರ ಬಾಹ್ಯಾಕಾಶಕ್ಕೆ ತೆರಳಿದ ಭಾರತೀಯ ಗಗನಯಾನಿ ಶುಭಾಂಶು ಶುಕ್ಲಾ ಅವರೊಂದಿಗೆ ನಡೆಯುತ್ತಿದೆ. ಇದು ಧಾರವಾಡ ಜಿಲ್ಲೆಗೆ ಹೆಮ್ಮೆ ತಂದಿರುವ ಘಟನೆ ಎಂದರು.

‘Sprouting in Space’ ಎಂಬ ಪ್ರಯೋಗದಲ್ಲಿ ಗಗನಯಾತ್ರಿಗಳು ಹೆಸರು ಕಾಳು ಮತ್ತು ಮೆಂತ್ಯೆ ಬೀಜಗಳಿಗೆ ನೀರು ಹಾಕಿ ಮೊಳೆಯುವ ಪ್ರಕ್ರಿಯೆ ಪರೀಕ್ಷೆ ಮಾಡಲಿದ್ದಾರೆ. ಈ ರೀತಿಯಲ್ಲಿ ಉತ್ಪಾದನೆಯಾದ ಮೊಳಕೆಗಳು ಅವರಿಗೆ ತಾಜಾ ಮತ್ತು ಪೌಷ್ಟಿಕ ಆಹಾರವನ್ನು ಒದಗಿಸಬಹುದು.

ಹೆಸರು ಕಾಳು ಮತ್ತು ಮೆಂತ್ಯೆ ಭಾರತದ ಆಹಾರ ಸಂಸ್ಕೃತಿಯಲ್ಲಿ ಪ್ರಮುಖವಾಗಿದ್ದು, ಹೆಚ್ಚು ಪೋಷಕಾಂಶ ಹೊಂದಿವೆ. ಬಾಹ್ಯಾಕಾಶದಲ್ಲಿ ಜಾಗ, ತೂಕ ಮತ್ತು ಸಂಪನ್ಮೂಲಗಳ ಮಿತಿಯ ನಡುವೆಯೂ ಈ ಮೊಳಕೆ ವಿಧಾನದ ಮೂಲಕ ಧಾರವಾಡ ಹೊಸ ಮಾರ್ಗ ತೋರಿಸುತ್ತಿದೆ.

ಈ ಸಂಶೋಧನೆಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಡಾ. ರವಿಕುಮಾರ್ ಹೊಸಮನಿ ಮತ್ತು ಐಐಟಿ ಧಾರವಾಡದ ಡಾ. ಸುಧೀರ್ ಸಿದ್ದಾಪುರೆಡ್ಡಿ ನೇತೃತ್ವ ವಹಿಸಿದ್ದಾರೆ. ಧಾರವಾಡ ಈಗ ಕೇವಲ ಶಿಕ್ಷಣ ಕೇಂದ್ರವಷ್ಟೇ ಅಲ್ಲದೆ, ವಿಜ್ಞಾನ ಮತ್ತು ನವೋದ್ಯಮದ ನಿಲಯವಾಗುತ್ತಿದೆ ಎಂದು ಜೋಶಿ ಹೇಳಿದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page