ಹೈದರಾಬಾದ್‌ನ ಐಐಟಿ ಕ್ಯಾಂಪಸ್ ನಲ್ಲಿ (IIT Hyderabad campus) ದೇಶದ ಮೊದಲ ಚಾಲಕರಹಿತ ಬಸ್ ಸೇವೆ ಆರಂಭವಾಗಿದೆ. ಇದು AI ಆಧಾರಿತ ಸಂಚಾರ ವ್ಯವಸ್ಥೆಯಿಂದ ನಿಯಂತ್ರಿತವಾಗಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕ್ಯಾಂಪಸ್ ಒಳಗೆ ಸಂಚರಿಸಲು ಬಳಸುತ್ತಿದ್ದಾರೆ.
- ಈ ಬಸ್ ಈಗ ಕೇವಲ ಕ್ಯಾಂಪಸ್ ಒಳಗೆ ಮಾತ್ರ ಓಡುತ್ತಿದೆ, ಸಾರ್ವಜನಿಕ ರಸ್ತೆಯಲ್ಲಿ ಇನ್ನೂ ಚಾಲನೆ ಮಾಡಿಲ್ಲ.
- ಈಗಾಗಲೇ 10,000ಕ್ಕೂ ಹೆಚ್ಚು ಜನ ಪ್ರಯಾಣಿಸಿದ್ದು, 90% ಜನರು ಉತ್ತಮ ಅನುಭವವಿದೆ ಎಂದು ಹೇಳಿದ್ದಾರೆ.
- ಬಸ್‌ನಲ್ಲಿ ಎಮರ್ಜೆನ್ಸಿ ಬ್ರೇಕಿಂಗ್, ಕ್ರೂಸ್ ಕಂಟ್ರೋಲ್, ಅಡೆತಡೆ ಪತ್ತೆ ಹೀಗೆ ಸುರಕ್ಷತಾ ವೈಶಿಷ್ಟ್ಯಗಳಿವೆ.
- ಮುಂದಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ವಿದ್ಯುತ್ ವಾಹನಗಳಲ್ಲೂ ಈ ತಂತ್ರಜ್ಞಾನವನ್ನು ಬಳಸಬಹುದು.
ಭವಿಷ್ಯದ ಅವಕಾಶಗಳು
- ಯೋಜನೆ ಯಶಸ್ವಿಯಾದರೆ ಬೇರೆ ನಗರಗಳಲ್ಲೂ ಚಾಲಕರಹಿತ ಸಾರಿಗೆ ಪ್ರಾರಂಭವಾಗಬಹುದು.
- ವಿಮಾನ ನಿಲ್ದಾಣ, ದೊಡ್ಡ ಕ್ಯಾಂಪಸ್ ಹಾಗೂ ಕೈಗಾರಿಕಾ ಪ್ರದೇಶಗಳಲ್ಲಿ ಬಳಸುವ ಯೋಜನೆಗಳೂ ನಡೆಯುತ್ತಿವೆ.
- ‘ಸಫಾರಿ’ ಯೋಜನೆಯಡಿ 8,000 ಕಿ.ಮೀ.ಗಳಷ್ಟು ರಸ್ತೆಗಳ ಡೇಟಾ ಸಂಗ್ರಹಿಸಿ, AI ತರಬೇತಿ ಮಾಡಲಾಗುತ್ತಿದೆ.
ಈ ಪ್ರಯೋಗ ಭಾರತದಲ್ಲಿ ಸ್ವಾಯತ್ತ ಸಾರ್ವಜನಿಕ ಸಾರಿಗೆಯತ್ತ ಒಂದು ದೊಡ್ಡ ಹೆಜ್ಜೆ ಎಂದು ಪರಿಗಣಿಸಲಾಗಿದೆ.