Home News ಮುತ್ತಿನನಗರಿಯಲ್ಲಿ ದೇಶದ ಮೊದಲ Driverless Bus!

ಮುತ್ತಿನನಗರಿಯಲ್ಲಿ ದೇಶದ ಮೊದಲ Driverless Bus!

The country's first driverless bus

ಹೈದರಾಬಾದ್‌ನ ಐಐಟಿ ಕ್ಯಾಂಪಸ್ ನಲ್ಲಿ (IIT Hyderabad campus) ದೇಶದ ಮೊದಲ ಚಾಲಕರಹಿತ ಬಸ್ ಸೇವೆ ಆರಂಭವಾಗಿದೆ. ಇದು AI ಆಧಾರಿತ ಸಂಚಾರ ವ್ಯವಸ್ಥೆಯಿಂದ ನಿಯಂತ್ರಿತವಾಗಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕ್ಯಾಂಪಸ್ ಒಳಗೆ ಸಂಚರಿಸಲು ಬಳಸುತ್ತಿದ್ದಾರೆ.

  • ಈ ಬಸ್ ಈಗ ಕೇವಲ ಕ್ಯಾಂಪಸ್ ಒಳಗೆ ಮಾತ್ರ ಓಡುತ್ತಿದೆ, ಸಾರ್ವಜನಿಕ ರಸ್ತೆಯಲ್ಲಿ ಇನ್ನೂ ಚಾಲನೆ ಮಾಡಿಲ್ಲ.
  • ಈಗಾಗಲೇ 10,000ಕ್ಕೂ ಹೆಚ್ಚು ಜನ ಪ್ರಯಾಣಿಸಿದ್ದು, 90% ಜನರು ಉತ್ತಮ ಅನುಭವವಿದೆ ಎಂದು ಹೇಳಿದ್ದಾರೆ.
  • ಬಸ್‌ನಲ್ಲಿ ಎಮರ್ಜೆನ್ಸಿ ಬ್ರೇಕಿಂಗ್, ಕ್ರೂಸ್ ಕಂಟ್ರೋಲ್, ಅಡೆತಡೆ ಪತ್ತೆ ಹೀಗೆ ಸುರಕ್ಷತಾ ವೈಶಿಷ್ಟ್ಯಗಳಿವೆ.
  • ಮುಂದಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ವಿದ್ಯುತ್ ವಾಹನಗಳಲ್ಲೂ ಈ ತಂತ್ರಜ್ಞಾನವನ್ನು ಬಳಸಬಹುದು.

ಭವಿಷ್ಯದ ಅವಕಾಶಗಳು

  • ಯೋಜನೆ ಯಶಸ್ವಿಯಾದರೆ ಬೇರೆ ನಗರಗಳಲ್ಲೂ ಚಾಲಕರಹಿತ ಸಾರಿಗೆ ಪ್ರಾರಂಭವಾಗಬಹುದು.
  • ವಿಮಾನ ನಿಲ್ದಾಣ, ದೊಡ್ಡ ಕ್ಯಾಂಪಸ್ ಹಾಗೂ ಕೈಗಾರಿಕಾ ಪ್ರದೇಶಗಳಲ್ಲಿ ಬಳಸುವ ಯೋಜನೆಗಳೂ ನಡೆಯುತ್ತಿವೆ.
  • ‘ಸಫಾರಿ’ ಯೋಜನೆಯಡಿ 8,000 ಕಿ.ಮೀ.ಗಳಷ್ಟು ರಸ್ತೆಗಳ ಡೇಟಾ ಸಂಗ್ರಹಿಸಿ, AI ತರಬೇತಿ ಮಾಡಲಾಗುತ್ತಿದೆ.

ಈ ಪ್ರಯೋಗ ಭಾರತದಲ್ಲಿ ಸ್ವಾಯತ್ತ ಸಾರ್ವಜನಿಕ ಸಾರಿಗೆಯತ್ತ ಒಂದು ದೊಡ್ಡ ಹೆಜ್ಜೆ ಎಂದು ಪರಿಗಣಿಸಲಾಗಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version