ಷೇರು ಮಾರುಕಟ್ಟೆ (stock market) ಕಳೆದ ಕೆಲವು ತಿಂಗಳಿಂದ ತೀವ್ರ ಅಸ್ಥಿರತೆಯನ್ನು ಅನುಭವಿಸುತ್ತಿದೆ. ನಿಫ್ಟಿ ಮತ್ತು ಸೆನ್ಸೆಕ್ಸ್ ಸೇರಿದಂತೆ ಪ್ರಮುಖ ಸೂಚ್ಯಂಕಗಳು ಕುಸಿತ. ಮಾರುಕಟ್ಟೆ ಇನ್ನಷ್ಟು ಕುಸಿಯುತ್ತದಾ? ಅಥವಾ ಬೆಲೆ ಏರಲು ಶುರುವಾಗುತ್ತದಾ? ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಲು ತಜ್ಞರು ಇನ್ನೂ ನಿರ್ಧಾರಕ್ಕೆ ಬಂದಿಲ್ಲ. ಆದರೆ, MarketSmith ಇಂಡಿಯಾ ಸಂಸ್ಥೆಯ ಈಕ್ವಿಟಿ ವಿಭಾಗದ ಮುಖ್ಯಸ್ಥ ಮಯೂರೇಶ್ ಜೋಷಿ ಅವರ ಪ್ರಕಾರ, ಮಾರುಕಟ್ಟೆಯ ಕುಸಿತದ ಹಂತ ಮುಗಿದಿದ್ದು, ಶೀಘ್ರದಲ್ಲೇ ಮೇಲ್ಮುಖವಾಗಲಿದೆ.
ಬಾಂಡ್ ಮತ್ತು ನಿಫ್ಟಿ ಗಳಿಕೆಯ ಅಂತರ
- ಇವೆರಡರ ನಡುವಿನ ವ್ಯತ್ಯಾಸ ಶೇ. 1.8ರಿಂದ 1.9ಕ್ಕೆ ಇಳಿಕೆಯಾಗಿದೆ.
- ಈ ಮಟ್ಟದ ಅಂತರದ ನಂತರ, ಇತಿಹಾಸದ ಪ್ರಕಾರ, ಷೇರು ಮಾರುಕಟ್ಟೆ ಪುನಃ ಏರಲು ಪ್ರಾರಂಭಿಸುತ್ತದೆ.
- ನಿಫ್ಟಿ500 ಇಂಡೆಕ್ಸ್ 500 ಷೇರುಗಳಲ್ಲಿ ಕೇವಲ ಶೇ. 15 ರಷ್ಟು ಷೇರುಗಳು ಮಾತ್ರ 200 ದಿನದ ಸರಾಸರಿ ಮೌಲ್ಯಕ್ಕಿಂತ ಹೆಚ್ಚು ಟ್ರೇಡಿಂಗ್ ಆಗುತ್ತಿವೆ.
- 2008, 2014, 2020ರಲ್ಲಿಯೂ ಇದೇ ರೀತಿ ಸಂಭವಿಸಿ, ನಂತರ ಮಾರುಕಟ್ಟೆ ಪುನಃ ಬೆಳವಣಿಗೆಯನ್ನು ಕಾಣಿತ್ತು.
ಆಗ್ರೋಕೆಮಿಕಲ್ಸ್: ಕೋರಮಂಡಲ್ ಇಂಟರ್ನ್ಯಾಷನಲ್ ಮೊದಲಾದ ಕಂಪನಿಗಳು ಉತ್ತಮ ಬೆಳವಣಿಗೆಯನ್ನು ಕಾಣಬಹುದು.
Healthcare: Max Healthcare, ಕಿಮ್ಸ್ ಮೊದಲಾದ ಷೇರುಗಳು ಬಲಿಷ್ಠವಾಗಿ ಕಾಣಿಸುತ್ತಿವೆ.
ಕೋಟಕ್ ಮಹೀಂದ್ರ ಬ್ಯಾಂಕ್, ಕರೂರ್ ವೈಷ್ಯ ಬ್ಯಾಂಕ್ ಮುಂತಾದ ಕಂಪನಿಗಳು ಮುಂದಿನ ದಿನಗಳಲ್ಲಿ ಉತ್ತಮ ಲಾಭ ನೀಡಬಹುದೆಂದು ತಜ್ಞರು ಸೂಚಿಸುತ್ತಾರೆ. ಹೂಡಿಕೆದಾರರು ಈ ವಲಯಗಳಲ್ಲಿ ಉತ್ತಮ ತೀರ್ಮಾನಗಳನ್ನು ತೆಗೆದುಕೊಳ್ಳುವುದರಿಂದ ಭವಿಷ್ಯದಲ್ಲಿ ಉತ್ತಮ ಲಾಭ ಪಡೆಯಲು ಸಾಧ್ಯ.