Home Business ಬೆಂಗಳೂರಿನಲ್ಲಿ ICAT ಮೂರನೇ ಕೇಂದ್ರ ಸ್ಥಾಪನೆ

ಬೆಂಗಳೂರಿನಲ್ಲಿ ICAT ಮೂರನೇ ಕೇಂದ್ರ ಸ್ಥಾಪನೆ

Union Industries Minister H.D. Kumaraswamy

ಕರ್ನಾಟಕದ ಜನತೆಗೆ ಕೇಂದ್ರ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ (Union Industries Minister H.D. Kumaraswamy) ಸಿಹಿ ಸುದ್ದಿ ನೀಡಿದ್ದಾರೆ. ರಾಜ್ಯದ ಯುವಕರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಐಕ್ಯಾಟ್ (ICAT-International Centre for Automotive Technology) ಮೂರನೇ ಕೇಂದ್ರ ಸ್ಥಾಪನೆಗೆ ಒಪ್ಪಂದವಾಗಿದೆ.

ಈ ಕೇಂದ್ರದಿಂದ ಎಲೆಕ್ಟ್ರಿಕ್ ವಾಹನ ತಂತ್ರಜ್ಞಾನ, ಸಾಫ್ಟ್​ವೇರ್ ನಿಯಂತ್ರಿತ ವಾಹನಗಳು, ಸ್ವಯಂಚಾಲಿತ ವ್ಯವಸ್ಥೆಗಳು ಮತ್ತು ದತ್ತಾಂಶ ಸುರಕ್ಷತೆಯಲ್ಲಿ ಮಹತ್ವದ ಉತ್ತೇಜನ ದೊರೆಯಲಿದೆ.

ಬೆಂಗಳೂರನ್ನು ಆಟೋಮೊಬೈಲ್ ಆವಿಷ್ಕಾರಗಳ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಐಕ್ಯಾಟ್ ಕೇಂದ್ರ ನೆರವಾಗಲಿದೆ. ಈ ಕೇಂದ್ರದಿಂದ ಕರ್ನಾಟಕ ಮಾತ್ರವಲ್ಲದೆ ಅಕ್ಕಪಕ್ಕದ ರಾಜ್ಯಗಳಿಗೂ ಉಪಯೋಗವಾಗಲಿದೆ.

ಇದಕ್ಕೂ ಮುನ್ನ ಗುರುಗ್ರಾಮ್ ಬಳಿಯ ಮನೇಸರ್ ನಲ್ಲಿರುವ ಐಕ್ಯಾಟ್ ಕೇಂದ್ರಗಳಿಗೆ ಭೇಟಿ ನೀಡಿದ ಸಚಿವರು, ಅವರ ಕಾರ್ಯವೈಖರಿಯನ್ನು ಮೆಚ್ಚಿಕೊಂಡರು.

ಬರುವ ದಿನಗಳಲ್ಲಿ ಈ ಹೊಸ ಕೇಂದ್ರವು ಹೊಸ ಉದ್ಯೋಗಾವಕಾಶಗಳು ಮತ್ತು ತಂತ್ರಜ್ಞಾನ ಆವಿಷ್ಕಾರಗಳಲ್ಲಿ ಮಹತ್ವದ ಪಾತ್ರವನ್ನು ವಹಿಸುವ ನಿರೀಕ್ಷೆಯಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version